Saturday, June 13, 2026
Homeಕರಾವಳಿಮಂಗಳೂರುಬಂಟ್ವಾಳದಲ್ಲಿ ಕೊರಗಜ್ಜನಿಗೆ ಹರಕೆಯ ಕೋಲ ಅರ್ಪಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ್

ಬಂಟ್ವಾಳದಲ್ಲಿ ಕೊರಗಜ್ಜನಿಗೆ ಹರಕೆಯ ಕೋಲ ಅರ್ಪಿಸಿದ ಡಿಂಪಲ್ ಕ್ವೀನ್ ರಚಿತಾ ರಾಮ್

- Advertisement -
- Advertisement -

ಬಂಟ್ವಾಳ; : ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ತುಳುನಾಡಿನ ಆರಾಧ್ಯ ಹಾಗೂ ಕಾರಣಿಕ ದೈವವಾದ ಕೊರಗಜ್ಜನಿಗೆ ಹರಕೆ ಕೋಲ ನೀಡಿದ್ದಾರೆ. ಬಂಟ್ವಾಳ ತಾಲೂಕಿನ ಬೆಂಜನಪದವಿನ ಕೊರಗಜ್ಜ ಸನ್ನಿಧಿಯಲ್ಲಿ ನಿನ್ನೆ ರಚಿತಾ ಹರಕೆ ಕೋಲ ನೀಡಿದ್ದಾರೆ.

ತಾವು ಚಿತ್ರರಂಗಕ್ಕೆ ಕಾಲಿಟ್ಟು ಯಶಸ್ವಿಯಾಗಿ 14 ವರ್ಷ ಪೂರೈಸಿದ ಸವಿನೆನಪು ಹಾಗೂ ತಾವು ಅಂದುಕೊಂಡಿದ್ದ ಇಷ್ಟಾರ್ಥಗಳು ಈಡೇರಿದ ಹಿನ್ನೆಲೆಯಲ್ಲಿ, ನಟಿ ರಚಿತಾ ರಾಮ್ ಅವರು ಈ ಹಿಂದೆ ಕೊರಗಜ್ಜ ದೈವಕ್ಕೆ ಕೋಲ ಸೇವೆ ಸಲ್ಲಿಸುವ ಹರಕೆ ಹೊತ್ತಿದ್ದರು. ಇದೀಗ ಆ ಪ್ರಾರ್ಥನೆ ನೆರವೇರಿದ ಕಾರಣ ಸನ್ನಿಧಿಗೆ ಭೇಟಿ ನೀಡಿ ಭಕ್ತಿಯಿಂದ ಹರಕೆಯನ್ನು ಪೂರ್ಣಗೊಳಿಸಿದ್ದಾರೆ.

ಕೇವಲ ಕುಟುಂಬದ ಆಪ್ತರು ಹಾಗೂ ಕ್ಷೇತ್ರದ ಪ್ರಮುಖರ ಸಮ್ಮುಖದಲ್ಲಿ ಅತ್ಯಂತ ಖಾಸಗಿಯಾಗಿ ಈ ಹರಕೆ ಕೋಲವನ್ನು ನೆರವೇರಿಸಲಾಗಿದೆ. ಕೋಲ ಸೇವೆಯ ಜೊತೆಗೆ ಕ್ಷೇತ್ರದಲ್ಲಿ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಕೂಡ ನಟಿಯ ಕಡೆಯಿಂದ ಆಯೋಜಿಸಲಾಗಿತ್ತು.

- Advertisement -

Latest News

error: Content is protected !!