Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ; 5ನೇ ವರ್ಷದ ಕೇರಳ ಸಾಂಪ್ರದಾಯಿಕ ವಿಷುಕಣಿ ಆಚರಣೆ

ಬೆಳ್ತಂಗಡಿ; 5ನೇ ವರ್ಷದ ಕೇರಳ ಸಾಂಪ್ರದಾಯಿಕ ವಿಷುಕಣಿ ಆಚರಣೆ

- Advertisement -
- Advertisement -

ಬೆಳ್ತಂಗಡಿ; ವಿಷುಕಣಿ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು ಶಾಸಕರಾದ ಶ್ರೀ ಹರೀಶ್ ಪೂಂಜರವರ ನೇತೃತ್ವದಲ್ಲಿ ನಡೆಯುವ 5ನೇ ವರ್ಷದ ಕೇರಳ ಸಾಂಪ್ರದಾಯಿಕ ವಿಷುಕಣಿ ಆಚರಣೆಯು ಉಜಿರೆಯ ಕೃಷ್ಣಾನುಗ್ರಹ ಸಭಾಭವನದಲ್ಲಿ ಶಾಸಕರಾದ ಹರೀಶ್ ಪೂಂಜರವರು ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಪ್ರಸಾದ್ ನೇತ್ರಾಲಯದ ಮುಖ್ಯಸ್ಥರಾದ ಡಾ.ಕೃಷ್ಣಪ್ರಸಾದ್ ಅವರು ಭಾಗವಹಿಸಿ ಬೆಳ್ತಂಗಡಿ ತಾಲೂಕಿನಲ್ಲಿ ನಡೆಯುವ ಎಲ್ಲಾ ಜನಪರ ವಿಶೇಷ ಕಾರ್ಯಕ್ರಮಗಳು ಇನ್ನೂ ಮುಂದೆಯೂ ಶಾಸಕರ ನೇತೃತ್ವದಲ್ಲಿ ನಡೆಯಲಿ. ನಾವೆಲ್ಲಾ ಹಿಂದೂ ಎಲ್ಲಾ ಸಮುದಾಯದವರು ನನ್ನವರು ಎಂದು ಭಾವನೆ ಇನ್ನಷ್ಟೂ ಮೂಡಲಿ ಎಂದ ಅವರು ಶಾಸಕರ ಪತ್ರಮುಖೇನಾ ನಮ್ಮ ನೇತ್ರಾಲಯಕ್ಕೆ ಯಾರಾದರೂ ಅಂಧ ವ್ಯಕ್ತಿಗಳು ಬಂದರೆ ಅಂತವರಿಗೆ ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಲಾಗುವುದು, ಶಾಸಕರ ಸಹಯೋಗದೊಂದಿಗೆ ಬೆಳ್ತಂಗಡಿಯನ್ನು ಅಂಧಮುಕ್ತವನ್ನಾಗಿ ಮಾಡಲಾಗುವುದು‌ ಎಂದರು. ಈ ಸಂದರ್ಭದಲ್ಲಿ ಖ್ಯಾತ ವಕೀಲರಾದ ಉಮೇಶ್ ಟಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಶ್ರೀನಿವಾಸ್ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿಲ್ಲಾ ಮನ್ ಕಿ ಭಾತ್ ಪ್ರಮುಖರಾದ ಸೀತಾರಾಮ ಬೆಳಾಲು, ಬಿಜೆಪಿ ಮಹಾಶಕ್ತಿಕೇಂದ್ರ ಅಧ್ಯಕ್ಷರಾದ ಹರೀಸದ್ ಕಳೆಂಜ, ಯಶವಂತ್ ಪುದುವೆಟ್ಟು, ಉಜಿರೆ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷರುಗಾಳಾದ ಉಷಾ ಕಾರಂತ್, ಪುಷ್ಪ ಆರ್ ಶೆಟ್ಟಿ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ವಿಷು ಕಣಿ ಆಚರಣಾ ಸಮಿತಿಯವರಾದ ಅನಿಲ್ ಶಿಬಾಜೆ, ಬಾಲಕೃಷ್ಣ ನೈಮಿಷ, ಪ್ರಸಾದ್ ಬಿ.ಎಸ್, ದಿವಿನೇಶ್ ಹಾಗೂ ಸದಸ್ಯರು, ಮುಖಂಡರಾದ ಸದಾನಂದ ಉಂಗಿಲಬೈಲು, ಸುಪ್ರಿತ್ ಜೈನ್, ಶಶಿಕಲಾ ಅರಳಿ,ಪ್ರಸಾದ್ ಕೆವಿ,  ಉಪಸ್ಥಿತರಿದ್ದರು‌‌.

- Advertisement -

Latest News

error: Content is protected !!