- Advertisement -
![]()
- Advertisement -
ಮೂಡುಬಿದಿರೆ ತಾಲೂಕಿನ ವಾಲ್ಪಾಡಿ ಗ್ರಾಮದಲ್ಲಿ ಗುರುವಾರ ಸಂಭವಿಸಿದ ಭಾರೀ ಗಾಳಿ ಮಳೆಗೆ ವ್ಯಾಪಕ ಹಾನಿ ಉಂಟಾಗಿದೆ.
ಬಿರುಗಾಳಿಯ ಆರ್ಭಟಕ್ಕೆ ಶೇಖರ ಪೂಜಾರಿ ಎಂಬುವವರ ಪತ್ನಿ ಸುಂದರಿ ಅವರು ವಾಸವಿದ್ದ ಮನೆಯ ಮೇಲೆ ಮರ ಬಿದ್ದಿದ್ದು, ಪರಿಣಾಮವಾಗಿ ಅವರು ಗಾಯಗೊಂಡಿದ್ದಾರೆ.
ಇದೇ ಗ್ರಾಮದ ರಾಜು ಎಂಬುವವರ ಮನೆಗೂ ಹಾನಿಯಾಗಿದ್ದು, ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅಲ್ಲದೆ, ಮಳೆಯ ರೌದ್ರಾವತಾರಕ್ಕೆ ಸ್ಥಳೀಯ ಕೃಷಿ ತೋಟಗಳು ಸಂಪೂರ್ಣವಾಗಿ ಹಾನಿಗೊಳಗಾಗಿದ್ದು, ರೈತರಿಗೆ ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.
- Advertisement -


