- Advertisement -
![]()
- Advertisement -
ಮಂಗಳೂರು: ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ಸ್ಥಾಪನೆ ಸಂಬಂಧ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಗೆ ಘೇರಾವ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ ಐಆರ್ ದಾಖಲಾಗಿದೆ.
ಸ್ಪೀಕರ್ ಖಾದರ್ ಗನ್ ಮ್ಯಾನ್ ಪೊಲೀಸ್ ದೂರು ನೀಡಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಟ್ಟು ಹನ್ನೊಂದು ಜನರ ಮೇಲೆ ಎಫ್ ಐಆರ್ ದಾಖಲಾಗಿದೆ.
ಕುತ್ತಾರಿನಲ್ಲಿ ಕೊರಗಜ್ಜ ವೃತ್ತ ಸ್ಥಾಪನೆ ಸಂಬಂಧ ಪರ ಮತ್ತು ವಿರೋದಾಭಿಪ್ರಾಯಗಳು ವ್ಯಕ್ತವಾಗಿದ್ದು, ಕಳೆದ ವಾರ ಸ್ಪೀಕರ್ ಯು.ಟಿ. ಖಾದರ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಕೆಲವು ಸ್ಥಳೀಯ ಯುವಕರು ಮುತ್ತಿಗೆ ಹಾಕಿ ವಿರೋಧ ವ್ಯಕ್ತಪಡಿಸಿದ್ದರು.
ಈ ಹಿನ್ನೆಲೆಯಲ್ಲಿ ಸ್ಪೀಕರ್ ಖಾದರ್ ಅಂಗರಕ್ಷಕ ಮೊಹಮ್ಮದ್ ಯಾಸೀನ್ ಇನಾಮ್ ದಾರ್ ಪೊಲೀಸ್ ದೂರು ನೀಡಿದ್ದರು.
- Advertisement -


