Wednesday, June 24, 2026
Homeಕರಾವಳಿಮಂಗಳೂರುಸಂಸದ ಕ್ಯಾಪ್ಟನ್ ಬ್ರಿಬೇಶ್ ಚೌಟರನ್ನು ಭೇಟಿಯಾದ ಕನ್ಯಾಡಿ ಸೇವಾಭಾರತಿ ತಂಡ

ಸಂಸದ ಕ್ಯಾಪ್ಟನ್ ಬ್ರಿಬೇಶ್ ಚೌಟರನ್ನು ಭೇಟಿಯಾದ ಕನ್ಯಾಡಿ ಸೇವಾಭಾರತಿ ತಂಡ

- Advertisement -
- Advertisement -

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯರಾಗಿರುವ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರನ್ನು ಸೇವಾಭಾರತಿ ತಂಡ ಮೇ 12 ರಂದು ಭೇಟಿ  ನೀಡಿ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರಿಗೆ ಕನ್ಯಾಡಿಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಪುನಶ್ಚೇತನ ಕೇಂದ್ರದ ಕಟ್ಟಡದ ಕುರಿತು ಪ್ರಸ್ತಾಪಿಸಿ ಸಹಕರಿಸುವಂತೆ ಮನವಿ ಮಾಡಿತು.

ಈ ಸಂದರ್ಭದಲ್ಲಿ ಸೇವಾಭಾರತಿ ಅಧ್ಯಕ್ಷ ಹಾಗೂ  ಸೇವಾಧಾಮದ ಸಂಸ್ಥಾಪಕರಾದ ಶ್ರೀ ಕೆ ವಿನಾಯಕ ರಾವ್, ಸೇವಾಭಾರತಿಯ ಖಜಾಂಚಿ ಶ್ರೀ ಜೈ ರಾಜ್ ಸಾಲ್ಯಾನ್ ಕಾನರ್ಪ, ಟ್ರಸ್ಟಿ ಶ್ರೀ ಪೃಥ್ವಿಶ್ ಹಾಗೂ ಕುವೆಟ್ಟು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಚಂದ್ರಕಾಂತ್ ನಿಡ್ಡಾಜೆ, ಸ್ವಯಂಸೇವಕರಾದ ಜಯರಾಜ್ ರವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!