Saturday, June 6, 2026
Homeಕರಾವಳಿಮಂಗಳೂರುಸುಳ್ಯ:ಅಕ್ರಮ ಮರಳು ದಂಧೆ ಪ್ರಕರಣ: 50-60 ಮೆಟ್ರಿಕ್‌‌ ಟನ್‌ ಮರಳು ಸ್ವಾಧೀನಪಡಿಸಿ ಪ್ರಕರಣ ದಾಖಲು

ಸುಳ್ಯ:ಅಕ್ರಮ ಮರಳು ದಂಧೆ ಪ್ರಕರಣ: 50-60 ಮೆಟ್ರಿಕ್‌‌ ಟನ್‌ ಮರಳು ಸ್ವಾಧೀನಪಡಿಸಿ ಪ್ರಕರಣ ದಾಖಲು

- Advertisement -
- Advertisement -

ಸುಳ್ಯ: ದಿನಾಂಕ:08.05.2026 ರಂದು ಬೆಳಿಗ್ಗೆ, ತೋಡಿಕಾನ ಗ್ರಾಮದ ಶೆಟ್ಟಿಯಡ್ಕ ಎಂಬಲ್ಲಿ, ಆರೋಪಿಗಳಾದ ಮನು ಪೆರ್ಮುಡ ಹಾಗೂ ಚೆಂಬು ಗ್ರಾಮದ ಆ್ಯಂಟನಿ ಎಂಬವರು ಕಳ್ಳತನದಿಂದ ಕಾನೂನು ಬಾಹಿರವಾಗಿ ನದಿಯಿಂದ ಮರಳನ್ನು ಕದ್ದು ಮಾರಾಟ ಮಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸಂತೋಷ್‌‌ B P, ಪೊಲೀಸ್‌ ಉಪನಿರೀಕ್ಷಕರು, ಸುಳ್ಯ ಪೊಲೀಸ್‌ ಠಾಣೆರವರು ಠಾಣಾ ಸಿಬ್ಬಂದಿಗಳೊಂದಿಗೆ ಮಾಹಿತಿ ಬಂದ ಸ್ಥಳಕ್ಕೆ ತೆರಳಿ ನೋಡಿದಾಗ ಆರೋಪಿಗಳು ಸ್ಥಳದಲ್ಲಿ ಸುಮಾರು 50-60 ಮೆಟ್ರಿಕ್‌‌ ಟನ್‌ ತೂಕದ ಸುಮಾರು 20 ಟಿಪ್ಪರ್‌‌ ಲೋಡ್‌‌ ಮರಳು ಸಂಗ್ರಹಿಸಿರೋದು ಕಂಡು ಬಂದಿದೆ. ಆ ಮರಳಿನ ಬಗ್ಗೆ ವಿಚಾರಿಸಿದಾಗ ಯಾವುದೇ ಪರವಾನಗಿ ಪಡೆಯದೇ, ಕಾನೂನು ಬಾಹಿರವಾಗಿ ಆರೋಪಿ ಮನು ಪೆರ್ಮುಡ, ಚೆಂಬು ಗ್ರಾಮದ ಆ್ಯಂಟನಿ ಎಂಬಾತನೊಂದಿಗೆ ಸೇರಿಕೊಂಡು ಮರಳನ್ನು ಕಳ್ಳತನದಿಂದ ಸಂಗ್ರಹ ಮಾಡಿ, ಬಳಿಕ ಲಾರಿಗಳಿಗೆ ಲೋಡ್‌‌ ಮಾಡಿ ಮಾರಾಟ ಮಾಡುತ್ತಿರುವುದು ತಿಳಿದುಬಂದಿರುತ್ತದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮಕ್ಕಾಗಿ ಸ್ಥಳದಲ್ಲಿದ್ದ ಅಂದಾಜು 1.20 ಲಕ್ಷ ರೂಪಾಯಿ ಮೌಲ್ಯದ ಮರಳನ್ನು ಸ್ವಾಧೀನಪಡಿಸಿ ಆರೋಪಿಗಳ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!