ಮಂಗಳೂರು :ಕುಡಿದು ಕಿರಿಕ್ ಮಾಡುತ್ತಿದ್ದ ವ್ಯಕ್ತಿಗೆ ಮಸೀದಿಯ ವಾಚ್ ಮೆನ್ ಹಲ್ಲೆ ಮಾಡಿದ ಪರಿಣಾಮ ವ್ಯಕ್ತಿ ಸಾವನ್ನಪ್ಪಿರುವ ಘಟನೆ ವೆನ್ಲಾಕ್ ಆಸ್ಪತ್ರೆ ಹಿಂಭಾಗದ ಮಸೀದಿಯ ಬಳಿ ನಡೆದಿದೆ. ಜಲ್ಲಿಗುಡ್ಡೆಯ ಪದ್ಮನಾಭ (44) ಮೃತ ವ್ಯಕ್ತಿ.
ಬಜಾಲ್ ಜಲ್ಲಿಗುಡ್ಡೆಯ ಪದ್ಮನಾಭ (44) ಎಂಬವರು ಕುಡಿತದ ಚಟ ಹೊಂದಿದ್ದು ಮಸೀದಿ ಎದುರಿನ ಆಟೋ ಚಾಲಕರಿಗೆ ಕಿರಿಕ್ ಮಾಡುತ್ತಿದ್ದರು. ಕುಡಿದು ಬಂದು ಆಟೋದಲ್ಲಿ ಕುಳಿತುಕೊಳ್ಳುವುದು, ಮಸೀದಿ ಬಳಿ ಕುಳಿತು ಅಸಭ್ಯ ರೀತಿ ಮಾತನಾಡುತ್ತಿದ್ದರು. ಈ ಬಗ್ಗೆ ಆಟೋ ಚಾಲಕರು, ಅಲ್ಲಿಯೇ ಇದ್ದ ಮಸೀದಿ ವಾಚ್ ಮನ್ ಬೈದಿದ್ದಾರೆ. ಮೊನ್ನೆ ಮಧ್ಯಾಹ್ನ ವಾಚ್ ಮನ್ ವೆಂಕಟ ಮತ್ತು ಪದ್ಮನಾಭ ನಡುವೆ ಗಲಾಟೆಯಾಗಿದೆ. ಈ ವೇಳೆ ವಾಚ್ ಮನ್ ತನ್ನ ಕೈಲಿದ್ದ ಲಾಠಿಯಲ್ಲಿ ಹೊಡೆದಿದ್ದಾರೆ. ಬಳಿಕ ಪದ್ಮನಾಭ ಕುಸಿದು ಬಿದ್ದಿದ್ದು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿ ಕೆಲ ಹೊತ್ತಿನಲ್ಲಿ ಪದ್ಮನಾಭ ಸಾವನ್ನಪ್ಪಿದ್ದಾರೆ.
ಘಟನೆ ಸಂಬಂಧಿಸಿ ಪಾಂಡೇಶ್ವರ ಪೊಲೀಸರು ಕೊಲೆ ಪ್ರಕರಣ ದಾಖಲಿಸಿದ್ದು ವಾಮಂಜೂರು ನಿವಾಸಿ ವಾಚ್ ಮನ್ ವೆಂಕಟ ಅವರನ್ನು ಬಂಧಿಸಿದ್ದಾರೆ.


