Saturday, June 6, 2026
Homeಕರಾವಳಿಮಂಗಳೂರುಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ವತಿಯಿಂದ ಗೌರವ ಸನ್ಮಾನ

ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ಬೆಳ್ತಂಗಡಿ ಇದರ ವತಿಯಿಂದ ಗೌರವ ಸನ್ಮಾನ

- Advertisement -
- Advertisement -

 ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಸ್ವಸ್ತಿ ನಿಲಯದ ಬೆಳ್ತಂಗಡಿ ವಾಣಿ ಕಾಲೇಜಿನ ಉಪನ್ಯಾಸಕ ದಂಪತಿ ಶ್ರೀಮತಿ ಮೀನಾಕ್ಷಿ ಮತ್ತು ಮಹಾಬಲ ಗೌಡ ಇವರ ಸುಪುತ್ರಿ ಕು.ಪ್ರಾಪ್ತಿ ಎಂ ಗೌಡ  ಇವರು ನೃತ್ಯ ಕಲೆ ಹಾಗೂ ಭಾಷಣದಲ್ಲಿ ಸಾಧನೆಯನ್ನು ಮಾಡಿ 2025-26 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 6 ನೇ ರ್ಯಾಂಕ್ ಗಳಿಸಿದ್ದು ಇವರ ಈ ಸಾಧನೆಯನ್ನು ಗುರುತಿಸಿ ಟ್ರಸ್ಟ್ ನ ವತಿಯಿಂದ ಗೌರವ ಪೂರ್ವಕ ಅಭಿನಂದನೆಯನ್ನು ಸಲ್ಲಿಸಲಾಯಿತು.

ಈ ಸಂಧರ್ಭದಲ್ಲಿ ಟ್ರಸ್ಟ್ ನ ಗೌರವಾಧ್ಯಕ್ಷರಾದ ರಂಜನ್ ಜಿ ಗೌಡ, ಕಾರ್ಯಾಧ್ಯಕ್ಷರಾದ ಶ್ರೀನಿವಾಸ ಗೌಡ ಬೆಳಾಲು, ಉಪಾಧ್ಯಕ್ಷರಾದ ವಸಂತ ಗೌಡ ಮರಕಡ, ಕಾರ್ಯದರ್ಶಿಯಾದ ಭರತ್ ಕುಮಾರ್, ಸ್ಥಾಪಕ ಟ್ರಸ್ಟಿ ನವೀನ್ ಬಿ ಕೆ,  ಟ್ರಸ್ಟಿ  ದಿನೇಶ್ ಕೊಲೆಂಜಿರೋಡಿ ಮತ್ತು ಮನೆಯವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!