- Advertisement -
![]()
- Advertisement -
ಮಂಗಳೂರು: 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಮಂಗಳೂರು ಉತ್ತರ ಪೊಲೀಸ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಂಗಳೂರಿನ ಕುಲಶೇಖರನಿವಾಸಿ ಗೂಡ್ಡ ಮುನೀರ್, ಟಿ ಪಿ ಮುನೀರ್ @ ಅಹಮ್ಮದ್ (59) ಬಂಧಿತ ಆರೋಪಿ. ಈತ ನ್ಯಾಯಾಲಯಕ್ಕೆ ಹಾಜರಾಗದೆ ಸುಮಾರು 2 ವರ್ಷಗಳಿಂದ ತಲೆ ಮರೆಸಿಕೊಂಡಿದ್ದರಿಂದ ನ್ಯಾಯಾಲಯವು ಆರೋಪಿತನಿಗೆ ವಾರೆಂಟ್ ಹೊರಡಿಸಿದ್ದು ಆರೋಪಿಯನ್ನು ದಿನಾಂಕ: 25-04-2026 ರಂದು ಉತ್ತರ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿರವರು ಕುಲಶೇಖರದಲ್ಲಿರುವ ಆತನ ಬಾಡಿಗೆ ಮನೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಸದ್ರಿ ವಾರಂಟ್ ಅಸಾಮಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
- Advertisement -


