Saturday, June 6, 2026
Homeಕರಾವಳಿಉಡುಪಿಉಡುಪಿ: ಪತಿಯ ಲಾಕರ್ ನಿಂದಲೇ 23 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಕದ್ದ ಪತ್ನಿ

ಉಡುಪಿ: ಪತಿಯ ಲಾಕರ್ ನಿಂದಲೇ 23 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಕದ್ದ ಪತ್ನಿ

- Advertisement -
- Advertisement -

ಉಡುಪಿ: ಪತಿಯ ಲಾಕರ್ ನಿಂದಲೇ ಪತ್ನಿ 23 ಲಕ್ಷ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಕದ್ದ ಅಚ್ಚರಿ ಪ್ರಸಂಗ ಉಡುಪಿ ನಗರದಲ್ಲಿ ನಡೆದಿದೆ.

ಉಚ್ಚಿಲ ಕಾಪು ನಿವಾಸಿ ಕಿರಣ್ ಕುಮಾರ್ (42), ಪಡುಬಿದ್ರಿಯ SEZ ಕಂಪನಿಯಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರಿಗೆ 2016ರಲ್ಲಿ ವನಿತಾ ಎಂಬವರೊಂದಿಗೆ ವಿವಾಹವಾಗಿದ್ದು, ದಾಂಪತ್ಯ ಜೀವನದಲ್ಲಿ ವೈಮನಸ್ಸು ಉಂಟಾಗಿ ಪ್ರಸ್ತುತ ಒಂದೇ ಮನೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು.

 ಕಿರಣ್ ತಮ್ಮ ದಾಖಲಾತಿಗಳು ಹಾಗೂ IDBI ಬ್ಯಾಂಕ್‌, ಉಡುಪಿ ಶಾಖೆಯ ಲಾಕರ್‌ ಕೀ ಯನ್ನು ಮನೆಯ ಅಲ್ಮಾರಿಯಲ್ಲಿ ಇಟ್ಟಿದ್ದರು. ಏಪ್ರಿಲ್ 10ರಂದು ಕಿರಣ್ ಕುಮಾರ್ ಕೆಲಸಕ್ಕೆ ತೆರಳಿದ್ದ ವೇಳೆ, ಮಧ್ಯಾಹ್ನ ಸುಮಾರು 2 ಗಂಟೆಗೆ ವನಿತಾ ಅವರು ಕೀ ಮೇಕರ್ ಸಹಾಯದಿಂದ ಅಲ್ಮಾರಿಯನ್ನು ಒಡೆದು ಅದರೊಳಗಿದ್ದ ಲಾಕರ್‌ ಕೀ ಯನ್ನು ಕಳವು ಮಾಡಿದ್ದಾರೆ.

ನಂತರ ಆ ಕೀ ಬಳಸಿ IDBI ಬ್ಯಾಂಕ್‌, ಉಡುಪಿ ಶಾಖೆಯ ಲಾಕರ್ ತೆರೆಯಿಸಿ, ಸುಮಾರು 169 ಗ್ರಾಂ ಚಿನ್ನ – ಅಂದಾಜು ಮೌಲ್ಯ 23 ಲಕ್ಷ 67 ಸಾವಿರ ರೂಪಾಯಿಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ವನಿತಾ ವಿರುದ್ಧ ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!