Saturday, June 6, 2026
Homeಕರಾವಳಿಮಂಗಳೂರುಬಂಟ್ವಾಳ; ಹಳೆ ವೈಷಮ್ಯದಿಂದ ವ್ಯಕ್ತಿ ಮೇಲೆ ಹಲ್ಲೆ, ಜೀವ ಬೆದರಿಕೆ

ಬಂಟ್ವಾಳ; ಹಳೆ ವೈಷಮ್ಯದಿಂದ ವ್ಯಕ್ತಿ ಮೇಲೆ ಹಲ್ಲೆ, ಜೀವ ಬೆದರಿಕೆ

- Advertisement -
- Advertisement -

ಬಂಟ್ವಾಳ; ಹಳೆ ವೈಷಮ್ಯದಿಂದ ವ್ಯಕ್ತಿ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವ ಘಟನೆ ಬಂಟ್ವಾಳದಲ್ಲಿ ನಡೆದಿದೆ.

ಬಂಟ್ವಾಳ ಮಾಣಿ ನಿವಾಸಿ ವಿಶ್ವನಾಥ (28) ರವರು ದಿನಾಂಕ:12-04-2026 ರಂದು ಸಂಜೆ ಮನೆಯಲ್ಲಿದ್ದಾಗ, ಪಿರ್ಯಾದಿದಾರರಿಗೆ ಪರಿಚಯವಿರುವ ಆರೋಪಿ ಬಂಟ್ವಾಳ ಬರಿಮಾರು ನಿವಾಸಿ ಪಿ. ನವೀನ (43) ಎಂಬಾತನು ಬಂದು ವಿಶ್ವನಾಥ್ ಅವರಿಗೆ ಸುಮಾರು ಒಂದು ವರ್ಷದ ಹಿಂದೆ ನಡೆದಿದ್ದ ಗಲಾಟೆ ಬಗ್ಗೆ ತಕರಾರು ತೆಗೆದು ಕಲ್ಲಿನಿಂದ ಹಲ್ಲೆ ನಡೆಸಿದ್ದು, ಜೀವಬೆದರಿಕೆ ಒಡ್ಡಿದ್ದಾನೆ.  ವಿಶ್ವನಾಥ್ ಗಾಯಗೊಂಡಿದ್ದು, ನೆರೆಕೆರೆಯವರು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಅ.ಕ್ರ: 92/2026, ಕಲಂ: 118(1), 109 BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ‌ಪ್ರಕರಣದ ಆರೋಪಿ ನವೀನನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!