- Advertisement -
![]()
- Advertisement -
ಮಂಗಳೂರು: ಪಿಯುಸಿಯಲ್ಲಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕು. ದಿಶಾ ಮೂಡಬಿದ್ರಿ ಅವರನ್ನು ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ವತಿಯಿಂದ ಸನ್ಮಾನಿಸಲಾಯಿತು.
ಮಲಬಾರ್ ಗೋಲ್ಡ್ ಮಂಗಳೂರು ಇದರ ಗ್ರಾಹಕರಾದ ಗಂಗಾಧರ ಪೂಜಾರಿ ಮತ್ತು ರಶ್ಮಿ ಜಿ. ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ದಿಶಾ, “ನನಗೆ ತುಂಬಾ ಖುಷಿಯಾಗಿದೆ” ಎಂದು ತಿಳಿಸಿ, ತನ್ನ ಸಾಧನೆಗೆ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಮಂಗಳೂರು ಸ್ಟೋರ್ ಹೆಡ್ ಹಫೀಜ್ ರಹ್ಮಾನ್, ಬ್ರಾಂಚ್ ಮ್ಯಾನೇಜರ್ ರಘುರಾಮ್ ಸಿ.ಎಸ್., ಮಾರ್ಕೆಟಿಂಗ್ ಮ್ಯಾನೇಜರ್ ಶೇಖ್ ಫರ್ಹಾನ್, ಸೇಲ್ಸ್ ಮ್ಯಾನೇಜರ್ ಗಿರೀಶ್ ಶೆಟ್ಟಿ, ಸಮೀರ್ (ಡೆಪ್ಯೂಟಿ ಸೇಲ್ಸ್ ಮ್ಯಾನೇಜರ್) ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
- Advertisement -


