- Advertisement -
![]()
- Advertisement -
ಕಲಬುರಗಿಯ ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರ ಮೃತದೇಹವು ರಸ್ತೆಬದಿಯಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಜ್ಯೋತಿ ಕಪಾಳೆ (57) ಕಲಬುರಗಿ ನಿವಾಸಿ ಮೃತರಾದವರು.
ಪೊಲೀಸರು ಮಹಿಳೆಯ ಸಾವನ್ನು ಕೊಲೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಮಹಿಳೆಯ ಮೃತದೇಹ ಬಹುತೇಕ ಸುಟ್ಟು ಕರಕಲಾಗಿದ್ದು, ಎರಡು ಕಾಲುಗಳ ಪಾದಗಳಿಗೆ ಬೆಂಕಿ ತಗುಲಿಲ್ಲ. ಒಂದು ಕಾಲಿನಲ್ಲಿ ಧರಿಸಿದ ಚಪ್ಪಲಿ ಇದ್ದು, ಇನ್ನೊಂದು ಚಪ್ಪಲಿ ಕೆಳಗೆ ಬಿದ್ದ ಸ್ಥಿತಿಯಲ್ಲಿತ್ತು. ಹೀಗಾಗಿ ಮಹಿಳೆಯನ್ನು ಬೇರೆಡೆ ಕೊಲೆಗೈದಿರುವ ಕಿಡಿಗೇಡಿಗಳು, ಇಲ್ಲಿ ತಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ.
ಸಿಪಿಐ ಶಿವಶಂಕರ ಸಾಹು, ಸಿಬ್ಬಂದಿಗಳಾದ ಕುಪೇಂದ್ರ, ಹುಸೇನ ಪಟೇಲ ಮತ್ತಿತರರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
- Advertisement -


