Saturday, June 6, 2026
Homeಆರಾಧನಾಕಾಪು ಮಾರಿಗುಡಿಗಳಲ್ಲಿ 2 ದಿನಗಳ ಸುಗ್ಗಿ ಮಾರಿಪೂಜೆ ವೈಭವದಿಂದ ಸಂಪನ್ನ

ಕಾಪು ಮಾರಿಗುಡಿಗಳಲ್ಲಿ 2 ದಿನಗಳ ಸುಗ್ಗಿ ಮಾರಿಪೂಜೆ ವೈಭವದಿಂದ ಸಂಪನ್ನ

- Advertisement -
- Advertisement -

ಉಡುಪಿ: ಕಾಪುವಿನ ಶ್ರೀ ಹಳೇ ಮಾರಿಗುಡಿ , ಶ್ರೀ ಹೊಸ ಮಾರಿಗುಡಿ ಮತ್ತು ಶ್ರೀ ಮೂರನೇ ಮಾರಿಗುಡಿಯಲ್ಲಿ ನಡೆಯುವ ಎರಡು ದಿನಗಳ ಸುಗ್ಗಿ ಮಾರಿಪೂಜೆ ಬುಧವಾರ ಸಂಜೆ ವೈಭವದಿಂದ ಸಂಪನ್ನಗೊಂಡಿತು.

ಮಂಗಳವಾರ ರಾತ್ರಿ ಕಾಪು ಹಳೇ ಮಾರಿಗುಡಿಗೆ ಶ್ರೀ ವೆಂಕಟರಮಣ ದೇವಸ್ಥಾನದಿಂದ, ಕಾಪು ಹೊಸ ಮಾರಿಗುಡಿ ಮತ್ತು ಕಾಪು ಮೂರನೇ (ಕಲ್ಯ) ಮಾರಿಗುಡಿಗೆ ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಿಂದ ಮಾರಿಯಮ್ಮ ದೇವಿಯ ಸಾಂಕೇತಿಕ ಮೂರ್ತಿ ಮತ್ತು ಆಭರಣಗಳನ್ನು ಮೆರವಣಿಗೆಯ ಮೂಲಕ ತರಲಾಯಿತು. ನಂತರದಲ್ಲಿ ಸಂಪ್ರದಾಯದಂತೆ ಮೂರ್ತಿಯನ್ನು ಮಾರಿ ಪೂಜೆಗೆಂದೇ ಹೊಂಗಾರು ಮರದಲ್ಲಿ ಕೆತ್ತಿದ ಮೂರ್ತಿಗೆ ಬದಲಿಸಿ ಗದ್ದುಗೆ ಪ್ರತಿಷ್ಠಾಪನೆ ನಡೆಸಲಾಯಿತು. ನಾನಾ ಧಾರ್ಮಿಕ ಅನುಷ್ಠಾನಗಳೊಂದಿಗೆ ರಾತ್ರಿ ಮಾರಿ ಪೂಜಾ ಮಹೋತ್ಸವ ನಡೆಯಿತು.

ಬುಧವಾರ ಮಧ್ಯಾಹ್ನದ ಪೂಜೆಯ ಬಳಿಕ ಸಂಜೆಯವರೆಗೆ ದರ್ಶನ ಸೇವೆ ನಡೆಯಿತು. ಸಂಜೆ ದೇವಿಯ ಮೂರ್ತಿಯನ್ನು ಮೆರವಣಿಗೆಯಲ್ಲಿ ಹೋಗಿ ಮಲ್ಲಾರಿನಲ್ಲಿರುವ ನಿಗದಿತ ಸ್ಥಳದಲ್ಲಿ ವಿಸರ್ಜಿಸುವುದರೊಂದಿಗೆ ಮಾರಿಪೂಜೆ ಮಹೋತ್ಸವ ಸಂಪೂರ್ಣಗೊಂಡಿತು.

ಮೂರು ಮಾರಿಗುಡಿಗಳಲ್ಲಿ ಲಕ್ಷಾಂತರ ಮಂದಿ ಭಕ್ತಾಧಿಗಳು ಭಾಗವಹಿಸಿ ಮಹೋತ್ಸವದಲ್ಲಿ ಭಾಗಿಯಾದರು.

- Advertisement -

Latest News

error: Content is protected !!