- Advertisement -
![]()
- Advertisement -
ಸುಳ್ಯ: ಬೊಳುಬೈಲಿ ಸಮೀಪ ಕಾರು ಮತ್ತು ಕಂಟೈನರ್ ನಡುವೆ ಭೀಕರ ಅಪಘಾತ ಸಂಭವಿಸಿಕಾರು ಚಾಲಕ ಸಾವನ್ನಪ್ಪಿರುವ ಘಟನೆ ನಡೆದಿದೆ. ಕಾಸರಗೋಡು ನೆಟ್ಟಣಿಗೆ ಗ್ರಾಮದ ಸತೀಶ ಕೆ. ಮೃತರು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸತೀಶ ಅವರನ್ನು ಸುಳ್ಯದ ಲೈಫ್ ಕೇರ್ ಆ್ಯಂಬುಲೆನ್ಸ್ ಚಾಲಕ ರಫೀಕ್ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಸುಳ್ಯದ ಕೆವಿಜಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
- Advertisement -


