Thursday, June 4, 2026
Homeಕರಾವಳಿಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪ.ಜಾತಿಗೆ  ಕಾಲೋನಿ ಅಭಿವೃದ್ಧಿ/ಪ್ರಗತಿ ಕಾಲೋನಿ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ 2 ಕೋಟಿ...

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪ.ಜಾತಿಗೆ  ಕಾಲೋನಿ ಅಭಿವೃದ್ಧಿ/ಪ್ರಗತಿ ಕಾಲೋನಿ ಯೋಜನೆಯಡಿ ರಸ್ತೆ ಅಭಿವೃದ್ಧಿಗೆ 2 ಕೋಟಿ ಅನುದಾನ ಮಂಜೂರು; ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ

- Advertisement -
- Advertisement -

 ಬೆಳ್ತಂಗಡಿ. 2025-26 ನೇ ಸಾಲಿನ ಕಾಲೋನಿ ಅಭಿವೃದ್ಧಿ/ಪ್ರಗತಿ ಕಾಲೋನಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಪ.ಜಾತಿಗೆ ಕಾಲೋನಿಗಳಲ್ಲಿ ಮೂಲಭೂತ ಸೌಲಭ್ಯ ಅಭಿವೃದ್ಧಿಪಡಿಸಲು ಈ ಕೆಳಗಿನ ಕಾಮಗಾರಿಗಳಿಗೆ ರೂ 200.00 ಲಕ್ಷಗಳ ಅನುದಾನವನ್ನು  ಮಂಜೂರು ಗೊಳಿಸುವಂತೆ  ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮುಖಾಂತರ  ದ.ಕ ಜಿಲ್ಲಾ ಗ್ಯಾರಂಟಿ  ಯೋಜನೆಗಳ ಉಪಾಧ್ಯಕ್ಷರಾದ ಶೇಖರ್ ಕುಕ್ಕೆ ಡಿ ಮತ್ತು, ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನೆಗಳ ಅಧ್ಯಕ್ಷರಾದ ಪದ್ಮನಾಭ ಸಾಲಿಯಾನ್ ರವರು ಮನವಿಯನ್ನು ಮಾಡಿದ್ದರು. ಈ ಮನವಿಗೆ ಪೂರಕವಾಗಿ ಸ್ಪಂದಿಸಿದ  ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ರವರು.  ಸಮಾಜ ಕಲ್ಯಾಣ ಇಲಾಖೆ ಯಿಂದ  ರೂ 200.00 ಲಕ್ಷಗಳ ಕಾಮಗಾರಿಗಳಿಗೆ ಮಂಜೂರಾತಿ ನೀಡಿ  ಸರ್ಕಾರದ ಆದೇಶವಾಗಿರುತ್ತದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವಾರಾಂ ಮಾಹಿತಿ ನೀಡಿದ್ದಾರೆ.

 ಅಭಿವೃದ್ಧಿ ಕಾಮಗಾರಿಗಳ ವಿವರಗಳು 

ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಸೋಣಂದೂರು ಗ್ರಾಮದ ಮಾಮುರ್ ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಕಾಂಕ್ರೀಟಿಕರಣ 20 ಲಕ್ಷ ರೂಪಾಯಿ

ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಕುಳ್ಳಂಜ ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಕಾಂಕ್ರೀಟಿಕರಣ 20 ಲಕ್ಷ ರೂಪಾಯಿ

ಬೆಳ್ತಂಗಡಿ ತಾಲೂಕು ಮಾಲಾಡಿ ಗ್ರಾಮದ ಶಕ್ತಿ ನಗರ ಎಎಸ್ ಎಂಕ್ಷಾಟ್ರಸ್ ಬಳಿಯಿಂದ ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಕಾಂಕ್ರೀಟ್ ಕರಣ  10 ಲಕ್ಷ ರೂಪಾಯಿ

ಬೆಳ್ತಂಗಡಿ ತಾಲೂಕು ಕುಕ್ಕೇಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಳಿಯಂಗಡಿ ಮುಖ್ಯ ರಸ್ತೆಯಿಂದ ಪಾಣೂರು ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಕಾಂಕ್ರೀಟಿಕರಣ 25 ಲಕ್ಷ ರೂಪಾಯಿ

 ಬೆಳ್ತಂಗಡಿ ತಾಲೂಕು ಕುಕ್ಕೇಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಾಣೂರು ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಕಾಂಕ್ರೀಟಕರಣ 25 ಲಕ್ಷ ರೂಪಾಯಿ

ಬೆಳ್ತಂಗಡಿ ತಾಲೂಕು ಕುಕ್ಕೇಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಪಿಲಿಯೂರು ಬರ್ಕದ ಪರಿಶಿಷ್ಟ ಜಾತಿ ಕಾಲೋನಿಯ  ರಸ್ತೆ ಕಾಂಕ್ರೀಟಿಕರಣ 25 ಲಕ್ಷ ರೂಪಾಯಿ

ಬೆಳ್ತಂಗಡಿ ತಾಲೂಕು ಕುಕ್ಕೇಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಬೇಡ್ಕರ್ ಭವನದ ಬಳಿ ಪರಿಶಿಷ್ಟ ಜಾತಿ ಕಾಲೋನಿಯ ರಸ್ತೆ ಕಾಂಕ್ರೀಟಿಕರಣ 20 ಲಕ್ಷ ರೂಪಾಯಿ

ಬೆಳ್ತಂಗಡಿ ತಾಲೂಕು ಪೆರಾಡಿ ಗ್ರಾಮದ ಕೊಂಡ್ರಂಜೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಕಾಂಕ್ರೀಟಿಕರಣ 25 ಲಕ್ಷ ರೂಪಾಯಿ

ಬೆಳ್ತಂಗಡಿ ತಾಲೂಕು ಗರ್ಡಾಡಿ ಗ್ರಾಮದ ರನ್ನಾಡಿ ಪಲ್ಟಿಯಿಂದ ಹಚ್ಚೇವು ಪಲ್ಕೆ ರಸ್ತೆ ಕಾಂಕ್ರೀಟಿಕರಣ 20 ಲಕ್ಷ ರೂಪಾಯಿ

ಬೆಳ್ತಂಗಡಿ ತಾಲೂಕು ಕೊಕ್ರಾಡಿ ಗ್ರಾಮದ ಮೂಡುಬೈಲು ಶಾಂತಿಚೆ ಪರಿಶಿಷ್ಟ ಜಾತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ ರೂಪಾಯಿ

ಹೀಗೆ ಒಟ್ಟು ಎರಡು ಕೋಟಿ ಅನುದಾನ ಮಂಜೂರಾಗಿದ್ದು ಈ ಅನುದಾನಕ್ಕೆ ಸಹಕರಿಸಿದ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ  ಮಹಾದೇವಪ್ಪ ರವರಿಗೆ  ರಕ್ಷಿತ್ ಶಿವರಾಂ ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

Latest News

error: Content is protected !!