Tuesday, June 9, 2026
Homeಕರಾವಳಿಮಂಗಳೂರುಲಿಂಗ ಸಮಾನತೆ ಪ್ರತಿಪಾದಿಸಲು ಮಹಿಳಾ ದಿನಾಚರಣೆ ಅವಶ್ಯಕ; ಕರ್ತವ್ಯದೊಂದಿಗೆ ಮಹಿಳೆಯರೂ ಸಾಧನೆಯ ಪಥದತ್ತ ಶ್ಲಾಘನೀಯ:ಮಂಗಳೂರು ಉಪವಿಭಾಗದ...

ಲಿಂಗ ಸಮಾನತೆ ಪ್ರತಿಪಾದಿಸಲು ಮಹಿಳಾ ದಿನಾಚರಣೆ ಅವಶ್ಯಕ; ಕರ್ತವ್ಯದೊಂದಿಗೆ ಮಹಿಳೆಯರೂ ಸಾಧನೆಯ ಪಥದತ್ತ ಶ್ಲಾಘನೀಯ:ಮಂಗಳೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಸೌಮ್ಯಲತಾ ಎನ್

- Advertisement -
- Advertisement -

ಬೆಳ್ತಂಗಡಿ : ಹೆಣ್ಣು, ಪುರುಷರ ಬಾಳಲ್ಲಿ ತಾಯಿಯಾಗಿ, ಸಹೋದರಿಯಾಗಿ, ಸಂಗಾತಿಯಾಗಿ ಅವನ ಜೀವನವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾಳೆ. ಪುರುಷ ಪ್ರಧಾನವಾದ ಸಮಾಜದಲ್ಲಿ ಒರ್ವ ಮಹಿಳೆ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಕಷ್ಟಕರ. ಆದರೂ ಸಮಾಜದಲ್ಲಿ ಸಾಧನೆಯೊಂದಿಗೆ ಪುರುಷರಷ್ಟೇ ಮಹಿಳೆಯರೂ ಸರಿ ಸಮಾನರು ಎಂದು ಈಗಾಗಲೇ ಹಲವಾರು ಮಹಿಳೆಯರು ನಿರೂಪಿಸಿರುವುದು ಷ್ಲಾಘನೀಯ ಕಾರ್ಯ. ಇಂತಹಾ ಮಹಿಳೆಯರ ಮಹಿಳೆಯರ ಸಾಧನೆಗಳನ್ನು ಕೊಂಡಾಡಲು, ಅವಳ ಕೊಡುಗೆಗಳನ್ನು ಸ್ಮರಿಸಲು, ಲಿಂಗ ಸಮಾನತೆನ್ನು ಪ್ರತಿಪಾದಿಸಲು ಮಹಿಳಾ ದಿನಾಚರಣೆ ಅತೀ ಅವಶ್ಯವಾಗಿದೆ ಎಂದು ಮಂಗಳೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಸೌಮ್ಯಲತಾ ಎನ್. ಹೇಳಿದರು.

ಅವರು ಮಾ.23 ರಂದು ಬೆಳ್ತಂಗಡಿ ತಾಲೂಕು ವಕೀಲರ ಭವನದಲ್ಲಿ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಎಲ್ಲಿ ಸ್ತ್ರೀಯರು ಗೌರವಿಸಲ್ಪಡುತ್ತಾರೊ ಅಲ್ಲಿ ದೇವತೆಗಳು ಸಂತುಷ್ಟಾರಾಗಿರುತ್ತಾರೆ, ಎಲ್ಲಿ ಸ್ತ್ರೀಯರನ್ನು ಅವಮಾನಗೊಳಿಸಲಾಗುತ್ತದೆಯೋ ಅಲ್ಲಿ ಮಾಡಿದ ಕಾರ್ಯಗಳೆಲ್ಲ ವ್ಯರ್ಥ ಎಂಬ ಮಾತು ಭಾರತಿಯ ಪರಂಪರೆಯಲ್ಲಿ ಮಹಿಳೆಯ ಸ್ಥಾನಮಾನವನ್ನು ಸೂಚಿಸುತ್ತದೆ. ಇಲ್ಲಿರುವ ವಕೀಲೆಯರು ಪ್ರತಿ ದಿನ ಕಚೇರಿಗೆ ಆಗಮಿಸುವ ಮುನ್ನ ತಾಯಿಯಾಗಿ ಮಕ್ಕಳ ಬೇಕು ಬೇಡಗಳನ್ನು ಪೊರೈಸಿ, ಪ್ರಕೃತಿದತ್ತವಾದ ದೈಹಿಕ ಸಮಸ್ಯೆಗಳನ್ನು ನಿಭಾಯಿಸಬೇಕಾಗುತ್ತದೆ. ಇದಕ್ಕಾಗಿ ಎಲ್ಲಾ ಮಹಿಳಾ ವಕೀಲರು ಅಭಿನಂದನೀಯರು. ನನಗೂ ನನ್ನ ವೃತ್ತಿಯಲ್ಲಿ ಪುರುಷ ಸಮಾನವಾಗಿ ಕರ್ತವ್ಯವನ್ನು ನಿರ್ವಹಿಸಿಕೊಂಡು ಬಂದಿರಲು ಪ್ರೊತ್ಸಾಹ ನೀಡಿರುವ ನನ್ನ ಕುಟುಂಬದ ಸದಸ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ ಎಂದರು.

ವಕೀಲರ ಸಂಘದ ಅಧ್ಯಕ್ಷ ಅಲೋಶಿಯಸ್ ಎಸ್. ಲೋಬೊ ಅವರು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಂಗಳೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕಿ ಸೌಮ್ಯಲತಾ ಎನ್., ಹಿರಿಯ ವಕೀಲೆ ಸ್ವರ್ಣಲತಾ ಎ., ಆರ್ ಸುಭಾಷಿಣಿ ಹಾಗೂ ಬೆಳ್ತಂಗಡಿ ವಕೀಲರ ಸಂಘದಿಂದ ನ್ಯಾಯಾಧೀಶರಾಗಿ ಆಯ್ಕೆಯಾದ ಮಂಜುನಾಥ ಶಿವಲಿಂಗಪ್ಪ ಜಿ. ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಾಧೀಶ ಮನು ಬಿ.ಕೆ., ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ., ಕೋಶಾಧಿಕಾರಿ ಮಲ್ತಾಜ್ ಬೇಗಂ ಉಪಸ್ಥಿತರಿದ್ದರು. ಯುವ ವಕೀಲೆ ಹೇಮಲತಾ ಹಾಗೂ ಪ್ರತೀಕ್ಷಾ ಅವರು ಕಾರ್ಯಕ್ರಮ ನಿರೂಪಿಸಿದರು. ಸಂಘದ ಪದಾಧಿಕಾರಿ ಸೌಮ್ಯ ಸ್ವಾಗತಿಸಿ, ಮಲ್ತಾಜ್ ಬೇಗಂ ವಂದಿಸಿದರು.

- Advertisement -

Latest News

error: Content is protected !!