Friday, June 5, 2026
Homeಕರಾವಳಿಮಂಗಳೂರುಸುಳ್ಯದ ಕಲ್ಮಕಾರಿನಲ್ಲಿ ಮೊಬೈಲ್ ಸ್ಫೋಟಗೊಂಡು ವ್ಯಕ್ತಿಗೆ ಗಾಯ

ಸುಳ್ಯದ ಕಲ್ಮಕಾರಿನಲ್ಲಿ ಮೊಬೈಲ್ ಸ್ಫೋಟಗೊಂಡು ವ್ಯಕ್ತಿಗೆ ಗಾಯ

- Advertisement -
- Advertisement -

ಸುಳ್ಯದ ಕಲ್ಮಕಾರಿನಲ್ಲಿ ಮೊಬೈಲ್ ಸ್ಫೋಟಗೊಂಡು ವ್ಯಕ್ತಿ ಗಾಯಗೊಂಡಿರುವ ಘಟನೆ ನಡೆದಿದೆ. ಗುರುಪ್ರಸಾದ್ ನಿಡುಬೆ ಗಾಯಗೊಂಡವರು.

ಗುರುಪ್ರಸಾದ್ ತಮ್ಮ ವಿವೋ ವೈ 100 ಎ ಮೊಬೈಲ್ ಅನ್ನು ಪ್ಯಾಂಟ್‌ನ ಕಿಸೆಯಲ್ಲಿ ಇಟ್ಟುಕೊಂಡಿದ್ದರು. ಈ ವೇಳೆ ಏಕಾಏಕಿ ಮೊಬೈಲ್ ಸ್ಫೋಟಗೊಂಡು ಅವರ ತೊಡೆ ಭಾಗಕ್ಕೆ ಗಾಯಗಳಾಗಿದೆ. ಸ್ಫೋಟದ ಪರಿಣಾಮವಾಗಿ ಬೆಂಕಿ ಕಾಣಿಸಿಕೊಳ್ಳದಿದ್ದರೂ, ಮೊಬೈಲ್ ಬ್ಯಾಟರಿ ಭಾಗ ಸಂಪೂರ್ಣ ಕಪ್ಪಾಗಿದ್ದು, ದೊಡ್ಡ ಶಬ್ದದೊಂದಿಗೆ ಹೊಗೆ ಹೊರಬಂದಿದೆ. ಮೊಬೈಲ್ ಇದ್ದ ಜಾಗದಲ್ಲಿ ಚರ್ಮ ಸುಟ್ಟು ಹೋಗಿದೆ.

- Advertisement -

Latest News

error: Content is protected !!