Wednesday, June 24, 2026
Homeಕರಾವಳಿಮಂಗಳೂರುಮಂಗಳೂರು; ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಾತನ ಬಂಧನ

ಮಂಗಳೂರು; ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದಾತನ ಬಂಧನ

- Advertisement -
- Advertisement -

ಮಂಗಳೂರು; ಡ್ರಗ್ ಪೆಡ್ಲಿಂಗ್ ಮಾಡುತ್ತಿದ್ದ ಯುವಕನ್ನು ಪೊಲೀಸರು ಬಂಧಿಸಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ನಡೆದಿದೆ. ಮಂಗಳೂರು ತಾಲೂಕು ಕಸಬ ಬೆಂಗ್ರೆ ನಿವಾಸಿ ಮೊಹಮ್ಮದ್ ಝಾಕೀರ್ ಹುಸೇನ್ (19) ಬಂಧಿತ ಆರೋಪಿ.

ಈತನಿಂದ ಸುಮಾರು 1,06,000/- ರೂಪಾಯಿ ಬೆಲೆ ಬಾಳುವ ನಿಷೇಧಿತ ಮಾದಕ ವಸ್ತುವಾದ 10.6 ಗ್ರಾಂ ತೂಕದ ಎಮ್.ಡಿ.ಎಮ್.ಎ ಮತ್ತು 1 ಸ್ಯಾಮ್ ಸಂಗ್ ಮೊಬೈಲ್ ಫೋನ್ ಹಾಗೂ ತೂಕಮಾಪನ, ಸ್ಟೋಕ್ ಟ್ಯೂಬ್, ಸಿರಿಂಜ್, ಸಿಗರ್ ಲೈಟ್, ನಂಬರ್ ಪ್ಲೇಟ್ ಇರದ ಹೀರೋ ಹೋಂಡಾ ಸ್ಟೆಂಡರ್ ಪ್ಲಸ್ ಹೊಸ ಬೈಕ್ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ದಿನಾಂಕ 22/03/2026 ರಂದು ಮಂಗಳೂರು ನಗರ ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ,ತಂಡವು ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕು ಬೆಳ್ಳ ಗ್ರಾಮದ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಎದುರು ಫೀಜಾ ಮೈದಾನದ ಸಾರ್ವಜನಿಕ ಸ್ಥಳದಲ್ಲಿ ಮೊಹಮ್ಮದ್ ಝಾಕೀರ್ ಎಮ್.ಡಿ.ಎಮ್.ಎ ಮಾದಕವಸ್ತುವನ್ನು ತಂದು ತನ್ನ ಗಿರಾಕಿಗಳಿಗೆ ಮತ್ತು ಕಾಲೇಜು ವಿಧ್ಯಾರ್ಥಿಗಳಿಗೆ ಹೆಚ್ಚಿನ ಹಣಕ್ಕಾಗಿ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದು ಆತನಿಂದ ಒಟ್ಟು 1,06,000/- ರೂಪಾಯಿ ಬೆಲೆ ಬಾಳುವ ನಿಷೇಧಿತ ಮಾದಕ ವಸ್ತುವಾದ 10.6 ಗ್ರಾಂ ತೂಕದ ಎಮ್.ಡಿ.ಎಮ್.ಎ ಮತ್ತು 1 ಸ್ಯಾಮ್ ಸಂಗ್ ಮೊಬೈಲ್ ಫೋನ್ ಹಾಗೂ ತೂಕಮಾಪನ-1 ಸ್ಟೋಕ್ ಟ್ಯೂಬ್-1, ಸಿರಿಂಜ್, ಸಿಗರ್ ಲೈಟ್ ಮತ್ತು ನಂಬರ್ ಪ್ಲೇಟ್ ಇರದ ಹೀರೋ ಹೋಂಡಾ ಸೈಂಡರ್ ಪ್ಲಸ್ ಹೊಸ ಬೈಕ್ ಹಾಗೂ ಇತರೆ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

6.5 25/2026 500 8(c). 22. 22(a), 22(b), 22(c) ಎನ್.ಡಿ.ಪಿ.ಎಸ್ ಕಾಯ್ದೆ – 1985 ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿರುತ್ತದೆ.

- Advertisement -

Latest News

error: Content is protected !!