Friday, June 5, 2026
Homeಕರಾವಳಿಮಂಗಳೂರುಮಂಗಳೂರು- ಸುಬ್ರಮಣ್ಯ ನಡುವಿನ ಪ್ಯಾಸೆಂಜರ್  ರೈಲುಗಳ ಸಂಚಾರ 35 ದಿನಗಳ ಕಾಲ ತಾತ್ಕಾಲಿಕ ರದ್ದು

ಮಂಗಳೂರು- ಸುಬ್ರಮಣ್ಯ ನಡುವಿನ ಪ್ಯಾಸೆಂಜರ್  ರೈಲುಗಳ ಸಂಚಾರ 35 ದಿನಗಳ ಕಾಲ ತಾತ್ಕಾಲಿಕ ರದ್ದು

- Advertisement -
- Advertisement -

ಮಂಗಳೂರು- ಸುಬ್ರಮಣ್ಯ ನಡುವಿನ ಪ್ಯಾಸೆಂಜರ್  ರೈಲು ಸಂಚಾರ 35 ದಿನಗಳ ಕಾಲ ತಾತ್ಕಾಲಿಕ ರದ್ದಾಗಲಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ. ದಕ್ಷಿಣ ಪಶ್ಚಿಮ ರೈಲ್ವೆ ವ್ಯಾಪ್ತಿಯಲ್ಲಿ ತುರ್ತು ಹಳಿಗಳ ಕಾಮಗಾರಿ ಹಿನ್ನಲೆ ಮಂಗಳೂರು ಮತ್ತು ಸುಬ್ರಹ್ಮಣ್ಯ ರೋಡ್ ನಡುವಿನ ಪ್ಯಾಸೆಂಜರ್ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ

ರದ್ದಾಗಲಿರುವ ರೈಲುಗಳ ವಿವರ: ಮಂಗಳೂರು – ಸುಬ್ರಹ್ಮಣ್ಯ ರೋಡ್ (56629) ಮತ್ತು ಸುಬ್ರಹ್ಮಣ್ಯ ರೋಡ್ – ಮಂಗಳೂರು (56630) ಪ್ಯಾಸೆಂಜರ್ ರೈಲುಗಳನ್ನು ಮಾರ್ಚ್ 23ರಿಂದ ಏಪ್ರಿಲ್ 14ರವರೆಗೆ ಹಾಗೂ ಜೂನ್ 10ರಿಂದ ಜೂನ್ 21ರವರೆಗೆ ಒಟ್ಟು 35 ದಿನಗಳ ಕಾಲ ರದ್ದುಪಡಿಸಲಾಗಿದೆ.

ಯಶವಂತಪುರದಿಂದ ಕಾರವಾರ ಮತ್ತು ಮಂಗಳೂರಿಗೆ ಸಂಚರಿಸುವ ಎಕ್ಸ್‌ಪ್ರೆಸ್ ರೈಲುಗಳು (16515, 16575, 16539) ಏಪ್ರಿಲ್ ತಿಂಗಳಲ್ಲಿ ಸುಮಾರು 20 ನಿಮಿಷಗಳಷ್ಟು ತಡವಾಗಿ ಸಂಚರಿಸಲಿವೆ. ಅಲ್ಲದೆ, ಏಪ್ರಿಲ್ 21ರಿಂದ ಜೂನ್ 9ರವರೆಗಿನ 50 ದಿನಗಳ ಅವಧಿಯಲ್ಲಿ ಮಂಗಳೂರು-ಸುಬ್ರಹ್ಮಣ್ಯ ಪ್ಯಾಸೆಂಜರ್ ರೈಲು ಸುಮಾರು 55 ನಿಮಿಷಗಳ ವಿಳಂಬದೊಂದಿಗೆ ಸಂಚರಿಸಲಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಪ್ರಯಾಣಿಕರು ರೈಲ್ವೆ ವೇಳಾಪಟ್ಟಿಯನ್ನು ಪರಿಶೀಲಿಸಿ ಸಹಕರಿಸುವಂತೆ ಕೋರಲಾಗಿದೆ.

- Advertisement -

Latest News

error: Content is protected !!