Thursday, June 4, 2026
Homeಕರಾವಳಿಉಡುಪಿಉಡುಪಿ; ಚಲಿಸುತ್ತಿದ್ದ ರೈಲಿನಿಂದ ಆಯ ತಪ್ಪಿ ಟ್ರಾಕ್‌ ಗೆ ಬಿದ್ದು ಯುವಕ ಸಾವು

ಉಡುಪಿ; ಚಲಿಸುತ್ತಿದ್ದ ರೈಲಿನಿಂದ ಆಯ ತಪ್ಪಿ ಟ್ರಾಕ್‌ ಗೆ ಬಿದ್ದು ಯುವಕ ಸಾವು

- Advertisement -
- Advertisement -

ಉಡುಪಿ; ಚಲಿಸುತ್ತಿದ್ದ ರೈಲಿನಿಂದ ಆಯ ತಪ್ಪಿ ಟ್ರಾಕ್‌ ಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಬೈಂದೂರು ಸಮೀಪ ನಡೆದಿದೆ.ಕೇರಳದ ಕೊಲ್ಲಂ ಸೇಪು ರಹೇಮಾನ್‌(33) ಮೃತ ಯುವಕ.

ಸೇಪು ರಹೇಮಾನ್‌(33) ಮಾರ್ಚ್ 17 ರಂದು ತಮ್ಮ ಸಂಬಂಧಿಕರಾದ ನಿಸಾಮ್‌ (ಮತ್ತು ಸಾಧಿಕ್‌ ರವರ ಜೊತೆಗೆ ಗೋವಾದ ಮಡಗಾಂವ್‌ನಿಂದ ತ್ರಿವೆಂಡ್ರಮ್‌ ನಾರ್ತ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ 22660 ರಲ್ಲಿ ರಾತ್ರಿ 19:50 ಗಂಟೆಗೆ ಹೊರಟಿದ್ದು ರಾತ್ರಿ 21:00 ಗಂಟೆಗೆ ಸೇಪು ರಹೇಮಾನ್‌(33) ರವರು ಮೊಬೈಲ್‌ ನಲ್ಲಿ ಮಾತಾಡಿಕೊಂಡು ಸೀಟಿನಿಂದ ಎದ್ದು ಡೋರ್‌ ಸಮೀಪದಲ್ಲಿ ಮೊಬೈಲ್‌ ನಲ್ಲಿ ಮಾತಾಡಿಕೊಂಡಿದ್ದಾಗ ಬೈಂದೂರು ಕಿರಿಮಂಜೇಶ್ವರದ ಹೈಸ್ಕೂಲ್‌ ಹತ್ತಿರ ಬರುವಾಗ ಚಲಿಸುತ್ತಿದ ರೈಲಿನಿಂದ ಆಯ ತಪ್ಪಿ ಕೆಳಗೆ ಟ್ರಾಕ್‌ ಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿದೆ.

ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 15/2026 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ

- Advertisement -

Latest News

error: Content is protected !!