Friday, June 5, 2026
Homeತಾಜಾ ಸುದ್ದಿಮೈಸೂರು; ಮುಂದಿನ ಚುನಾವಣೆಯಲ್ಲೂ ಜೆಡಿಎಸ್ ಪಕ್ಷದಿಂದಲೇ ನನ್ನ ಸ್ಪರ್ಧೆ; ಚಾಮುಂಡೇಶ್ವರಿ ಶಾಸಕ ಜಿಟಿ.ದೇವೇಗೌಡ ಸ್ಪಷ್ಟನೆ

ಮೈಸೂರು; ಮುಂದಿನ ಚುನಾವಣೆಯಲ್ಲೂ ಜೆಡಿಎಸ್ ಪಕ್ಷದಿಂದಲೇ ನನ್ನ ಸ್ಪರ್ಧೆ; ಚಾಮುಂಡೇಶ್ವರಿ ಶಾಸಕ ಜಿಟಿ.ದೇವೇಗೌಡ ಸ್ಪಷ್ಟನೆ

- Advertisement -
- Advertisement -

ಮೈಸೂರು; ಮುಂದಿನ ಚುನಾವಣೆಯಲ್ಲೂ ಜೆಡಿಎಸ್ ಪಕ್ಷದಿಂದಲೇ ನನ್ನ ಸ್ಪರ್ಧೆ ಎಂದು ಚಾಮುಂಡೇಶ್ವರಿ ಶಾಸಕ ಜಿ. ಟಿ.ದೇವೇಗೌಡ ಸ್ಪಷ್ಟನೆ ನೀಡಿದ್ದಾರೆ.

ಚಾಮುಂಡೇಶ್ವರಿ ಕ್ಷೇತ್ರದ ಜಯಪುರ ಗ್ರಾಮದಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ ಜೆಡಿಎಸ್ ಬಿಡುವ ಪ್ರಶ್ನೇಯೇ ಇಲ್ಲ. ಒಂದು ವೇಳೆ ಜೆಡಿಎಸ್ ಪಕ್ಷದಿಂದ ಟಿಕೆಟ್ ಕೊಡದಿದ್ದರೆ ನೀವು ಹೇಳಿದಂತೆ ಕೇಳುತ್ತೇನೆ ಎಂದು ಮತದಾರರ ಮುಂದೆ ಶಾಸಕ ಜಿ.ಟಿ ದೇವೇಗೌಡ  ಹೊಸ ದಾಳ ಉರುಳಿಸಿದ್ದಾರೆ.

ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ ಇಲ್ಲೇ ಇರುತ್ತೇನೆ.ಟಿಕೆಟ್ ಕೊಡದಿದ್ದರೆ ಮತದಾರರು ನೀವು ಏನ್ ಹೇಳುತ್ತೀರಾ ಅದಕ್ಕೆ ನಾನು ಬದ್ಧ. ಅರ್ಜಿ ಹಾಕು ಅಂದರೆ ಹಾಕುತ್ತೇನೆ. ನಿಮ್ಮ ಪ್ರೀತಿ ಆಶೀರ್ವಾದವೇ ನನಗೆ ದೈವ. ನನ್ನ ಬಳಿ ಏನು ಸಹಾಯ ಮಾಡಿಸಿಕೊಳ್ಳದ ಜನರು ನನ್ನನ್ನು ಗೆಲ್ಲಿಸಿದ್ದಾರೆ. ನಾನು ಬೆಳೆಸಿದವರು, ದುಡ್ಡು ಮಾಡಿದವರು ನನ್ನ ವಿರುದ್ಧವೇ ನಿಂತಿದ್ದಾರೆ.ಇದು ಇವತ್ತಿನದ್ದಲ್ಲ ಹಿಂದಿನಿಂದಲೂ ನಡೆದು ಕೊಂಡು ಬಂದಿದೆ. ನಿಮ್ಮಜೊತೆ ನಾನು ಇರುತ್ತೇನೆ ನಿಮ್ಮ ಆಶೀರ್ವಾದ ಸದಾ ನನ್ನ ಮೇಲಿರಲಿ ಎಂದು ಹೇಳುವ ಮೂಲಕ ಕುತೂಹಲ ಕೆರಳಿಸಿದ್ದಾರೆ.

- Advertisement -

Latest News

error: Content is protected !!