Wednesday, June 24, 2026
Homeಕರಾವಳಿಮಂಗಳೂರುಮಂಗಳೂರಿನ ಕಾವೂರಿನಲ್ಲಿ ಮನೆಯೊಂದರಿಂದ ಕಳ್ಳತನ ಪ್ರಕರಣ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

ಮಂಗಳೂರಿನ ಕಾವೂರಿನಲ್ಲಿ ಮನೆಯೊಂದರಿಂದ ಕಳ್ಳತನ ಪ್ರಕರಣ: 24 ಗಂಟೆಯಲ್ಲಿ ಆರೋಪಿಯನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಮಂಗಳೂರಿನ ಕಾವೂರಿನಲ್ಲಿ ಮನೆಯೊಂದರಿಂದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಿಂಚಿನ ಕಾರ್ಯಾಚರಣೆ ನಡೆಸಿ 24 ಗಂಟೆಯಲ್ಲಿ ಆರೋಪಿಯನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಸಜೀಪನಡು ನಿವಾಸಿ ಅಶೋಕ್ (41) ಬಂಧಿತ ಆರೋಪಿ.

ಕಾವೂರು ಉಲ್ಲಾಸ್ ನಗರದಲ್ಲಿ ಮನೆಯೊಂದಕ್ಕೆ ದಿನಾಂಕ: 07-03-2026 ರಂದು ಮಧ್ಯಾಹ್ನ 12-00 ಗಂಟೆ ಅವಧಿಯಲ್ಲಿ ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆಯ ಬಾಗಿಲಿನ ಬೀಗ ಮುರಿದು ಕಳ್ಳರು ಒಳಪ್ರವೇಶಿಸಿ, ಸುಮಾರು ರೂ 4,80,000/- ಬೆಲೆಯ 39 ಗ್ರಾಂ ಚಿನ್ನಭಾರಣ, 182 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿದ ಬಗ್ಗೆ ನೀಡಿದ ದೂರಿನಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆಗಾಗಿ ಕಾವೂರು ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಯ ಪತ್ತೆ ತಂಡವನ್ನು ರಚಿಸಿದ್ದರು.  ಅದರಂತೆ ಕೇವಲ 24 ಗಂಟೆಯಲ್ಲಿ ಆರೋಪಿ ಅಶೋಕನನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಆತನಿಂದ ಕಳವು ಮಾಡಿರುವ ಎಲ್ಲಾ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ವಿಧಿಸಿದೆ..

ಈ ಪತ್ತೆ ಕಾರ್ಯಚಾರಣೆಯಲ್ಲಿ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಶ್ರೀ ರಾಘವೇಂದ್ರ ಎಂ. ಬೈಂದೂರು ಪೊಲೀಸ್ ಉಪ-ನಿರೀಕ್ಷಕರಾದ ಶ್ರೀ ಮಲ್ಲಿಕಾರ್ಜುನ ಬಿರಾದಾರ ಹಾಗೂ ಕಾವೂರು ಠಾಣಾ ಸಿಬ್ಬಂದಿಯಾದ ದಿನೇಶ್, ಮಾಲತೇಶ್, ನಾಗರಾಜ್ ಹಾಗೂ ರಿಯಾಜ್ ರವರು ಪತ್ತೆ ಕಾರ್ಯ ನಡೆಸಿರುತ್ತಾರೆ.

- Advertisement -

Latest News

error: Content is protected !!