Wednesday, June 24, 2026
Homeಕರಾವಳಿಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಪತ್ತೆ ಹಚ್ಚಿದ ಪೊಲೀಸರು; ನಾಲ್ಕು ಹೋರಿಗಳ ಸಹಿತ ವಾಹನ ಚಾಲಕನ ಬಂಧನ

ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಪತ್ತೆ ಹಚ್ಚಿದ ಪೊಲೀಸರು; ನಾಲ್ಕು ಹೋರಿಗಳ ಸಹಿತ ವಾಹನ ಚಾಲಕನ ಬಂಧನ

- Advertisement -
- Advertisement -

ಉಪ್ಪಿನಂಗಡಿ: ಕಾಸರಗೋಡಿನ ಕಸಾಯಿಖಾನೆಗೆಂದು ಅರಸೀಕೆರೆಯಿಂದ ನಾಲ್ಕು ಹೋರಿಗಳನ್ನು ಹಿಂಸಾತ್ಮಕವಾಗಿ ಸಾಗಿಸುತ್ತಿದ್ದು, ಈ ವೇಳೆಯಲ್ಲಿ ಪೊಲೀಸರು ಗುಂಡ್ಯ ಚೆಕ್ ಪೋಸ್ಟ್ ಬಳಿ ಜಾನುವಾರುಗಳನ್ನು ಪತ್ತೆ ಹಚ್ಚಿ, ನಾಲ್ಕು ಹೋರಿಗಳ ಸಹಿತ ವಾಹನ ಚಾಲಕನನ್ನು ಬಂಧಿಸಿದ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.

ಬಂಧಿತ ಗೂಡ್ಸ್ ಟೆಂಪೊ ಚಾಲಕನನ್ನು ಕುಮಾರ್ ಎಂದು ಗುರುತಿಸಲಾಗಿದೆ.

ಈ ಬಗ್ಗೆ ಪ್ರೊಬೆಷನರಿ ಎಎಸ್ಪಿ ಅನನ್ಯ ಶ್ರೀವಾಸ್ತವ್ ಅವರಿಗೆ ಬಂದ ಖಚಿತ ಮಾಹಿತಿಯ ಮೇರೆಗೆ ಗುಂಡ್ಯ ಚೆಕ್ ಪೋಸ್ಟ್ ಬಳಿ ಕಾರ್ಯ ನಿರತ ಪೊಲೀಸರು ತಪಾಸನೆ ಕೈಗೊಂಡಾಗ ಕೃತ್ಯ ಬೆಳಕಿಗೆ ಬಂದಿದೆ.

ಅಕ್ರಮ ಸಾಗಾಟಕ್ಕೆ ಬಳಸಿದ ಗೂಡ್ಸ್ ಟೆಂಪೊ ಸಹಿತ ವಾಹನ ಚಾಲಕ ಕುಮಾರ್‌ ನನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!