Sunday, June 7, 2026
Homeತಾಜಾ ಸುದ್ದಿನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸರ್ಕಾರಿ ವೈದ್ಯರು ಮುಂದಾಗಿರುವ ಹಿನ್ನೆಲೆ; ಇಂದು ಮಧ್ಯಾಹ್ನ ಸಿಎಂ ಜೊತೆ ಸಂಧಾನ...

ನಾಳೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸರ್ಕಾರಿ ವೈದ್ಯರು ಮುಂದಾಗಿರುವ ಹಿನ್ನೆಲೆ; ಇಂದು ಮಧ್ಯಾಹ್ನ ಸಿಎಂ ಜೊತೆ ಸಂಧಾನ ಸಭೆ

- Advertisement -
- Advertisement -

ಬೆಂಗಳೂರು: ಆರೋಗ್ಯ ಇಲಾಖೆ ವೈದ್ಯರು ಮತ್ತು ಸಿಬ್ಬಂದಿ ಮುಷ್ಕರ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ರಾಜ್ಯ ಸರ್ಕಾರದಿಂದ ಸಂಧಾನ ಸಭೆ ನಡೆಯಲಿದೆ.

ಇಂದು ಮಧ್ಯಾಹ್ನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಜೊತೆ ವೈದ್ಯರ ಸಂಧಾನ ಸಭೆ ನಡೆಸುವುದಾಗಿ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ವಿಧಾನಸಭೆಯಲ್ಲಿ ಶೂನ್ಯವೇಳೆಯ ಕಲಾಪದಲ್ಲಿ ಇಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ವೈದ್ಯರ ಮುಷ್ಕರ ವಿಚಾರ ಪ್ರಸ್ತಾಪಿಸಿ, ರಾಜ್ಯ ಸರ್ಕಾರ ಸಮಸ್ಯೆ ಪರಿಹರಿಸುವಂತೆ ಆಗ್ರಹಿಸಿದ್ದರು.

ಔಷಧ ಪೂರೈಕೆ ಮತ್ತು ಖಾಲಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ನಾಳೆಯಿಂದ ಒಪಿಡಿ ಬಂದ್ ಮಾಡಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸರ್ಕಾರಿ ವೈದ್ಯರು ಮುಂದಾಗಿದ್ದಾರೆ

- Advertisement -

Latest News

error: Content is protected !!