ಮಂಗಳೂರು: ಕೊಲೆ ಪ್ರಕರಣದ ಆರೋಪಿಗೆ ಪ್ರಕರಣದ ಆರೋಪಿದೆ ಜೀವಾವಧಿ ಶಿಕ್ಷೆ ವಿಧಿಸಿ 2ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ನ್ಯಾಯಧೀಶರಾದ ಜಗದೀಶ್ ವಿ ಎನ್ ಮಹತ್ವದ ಆದೇಶ ನೀಡಿದ್ದಾರೆ. ಮುರುಗನ್ ಜೀವಾವಧಿ ಶಿಕ್ಷೆಗೊಳಗಾದ ಆರೋಪಿ.
ಪ್ರಕರಣದ ವಿವರ; ದಿನಾಂಕ 19-03-2022 ರಂದು ರಾತ್ರಿ ಸುಮಾರು 09-45 ಗಂಟೆಗೆ ಬಪ್ಪನಾಡು ಗ್ರಾಮದ ಮುಲ್ಕಿ ಪೇಟೆಯ ಟುರಿಸ್ಟ್ ಕಾರು ಪಾರ್ಕಿಂಗ್ ಬಳಿ ಉಲ್ಲಂಜೆ ಎಂಬಲ್ಲಿಯ ಹರೀಶ್ ಸಾಲ್ಯಾನ್(47)ಎಂಬಾತನನ್ನು ಹಣಕಾಸಿನ ದ್ವೇಷದಿಂದ ಆರೋಪಿ ಮುರುಗನ್ ಮುಖಕ್ಕೆ ಸಿಮೆಂಟ್ ಕಾಂಕ್ರಿಟ್ ಸಹಿತ ಇರುವ ಕೆಂಪು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ. ಈ ಬಗ್ಗೆ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಪ್ರಕರಣದ ಸಂಪೂರ್ಣ ತನಿಖೆಯನ್ನು PI ಕುಸುಮಾಧರ್ ರವರು ನಡೆಸಿ ನ್ಯಾಯಾಲಯಕ್ಕೆ ದೋಷರೋಪಣ ಪಟ್ಟಿ ಸಲ್ಲಿಸಿದ್ದರು. ತನಿಖಾ ಸಹಾಯಕರಾಗಿ ASI ಸಂಜೀವ್ ಸರ್ ರವರು ತನಿಖಾ ಸಮಯ ಸಹಕರಿಸಿದ್ದರು.
ಇದೀಗ ಆರೋಪಿಗೆ ನ್ಯಾಯಧೀಶರಾದ ಜಗದೀಶ್ V. N. ರವರು ಜೀವಾವಧಿ ಶಿಕ್ಷೆ ಹಾಗೂ 10,000 ದಂಡ ವಿಧಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪರ PP ಶ್ರೀಮತಿ ಜ್ಯೋತಿ ಪ್ರಮೋದ್ ನಾಯಕ್ ರವರು ವಾದ ಮಂಡಿಸಿರುತ್ತಾರೆ.


