ಬೆಳ್ತಂಗಡಿ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ವಿಭಾಗದ ಬೆಳ್ತಂಗಡಿ, ಉಪ್ಪಿನಂಗಡಿ, ಸುಳ್ಯ, , ಪುತ್ತೂರು, ಪಂಜ ಮತ್ತು ಸುಬ್ರಹ್ಮಣ್ಯ ವಲಯಗಳ ವ್ಯಾಪ್ತಿಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗುತ್ತಿದ್ದು ಪ್ರತಿ ವರ್ಷವೂ ಬೆಳೆ ಪರಿಹಾರ ಹಾಗೂ ಮಾನವ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಹಾಗೂ ಜನವಸತಿ ಪ್ರದೇಶಗಳಿಗೆ ಆನೆಗಳು ಹಾನಿ ಮಾಡಿದಾಗ ಅವುಗಳನ್ನು ಕಾಡಿಗೆ ಓಡಿಸಲು ಬೇರೆ ವಿಭಾಗದಿಂದ Elephant Task Force ಅನ್ನು ಕರೆಯಿಸಬೇಕಾಗುತ್ತಿರುವುದರಿಂದ ಹಿಮ್ಮೆಟ್ಟಿಸುವ ಪ್ರಕ್ರಿಯೆ ತಡವಾಗುತ್ತಿದ್ದು. ಹಿಮ್ಮೆಟಿಸಲು , ಮಂಗಳೂರು ವಿಭಾಗಕ್ಕೆ ಹೊಸದಾಗಿ ಅಧಿಕಾರಿ/ಸಿಬ್ಬಂದಿನ್ನೊಳಗೊಂಡ ಆನೆ ಕಾರ್ಯಪಡೆ (Elephant Task Force) ಯನ್ನು ಸರ್ಕಾರ ರಚಿಸಿ ಆದೇಶಿಸಿದೆ.

ತಾಲೂಕಿನ ಬಹುದಿನದ ಬೇಡಿಕೆಯನ್ನು ಈಡೇರಿಸಿದ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಹಾಗೂ ಸರ್ಕಾರಕ್ಕೆ ಅಭಿನಂದನೆಗಳು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ತಿಳಿಸಿದ್ದಾರೆ.


