Thursday, June 4, 2026
Homeಕರಾವಳಿಮಂಗಳೂರುಮಂಗಳೂರು; ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಸತೀಶ್...

ಮಂಗಳೂರು; ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಸತೀಶ್ ಪ್ರಭು ಇನ್ನಿಲ್ಲ

- Advertisement -
- Advertisement -

ಮಂಗಳೂರು; ಹಿರಿಯ ಆರ್ ಎಸ್ ಎಸ್ ಕಾರ್ಯಕರ್ತ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವಕ್ತಾರ ಸತೀಶ್ ಪ್ರಭು ಅವರು  ನಿಧನರಾಗಿದ್ದಾರೆ. ಸತೀಶ್ ಪ್ರಭು ರಥಬೀದಿಯ ತಮ್ಮ ಮನೆಯಲ್ಲಿದ್ದಾಗ ಕುಸಿದು ಬಿದ್ದ ಅವರನ್ನು ಕೂಡಲೇ ಯೆನಪೋಯ ಆಸ್ಪತ್ರೆಗೆ ಒಯ್ಯಲಾಗಿತ್ತು.‌ ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.
ಸಂಘನಿಕೇತನದ ಕೇಶವ ಸಂವರ್ಧನ ಸಮಿತಿಯ ಉಪಾಧ್ಯಕ್ಷ, ರಥಬೀದಿ ವೆಂಕಟರಮಣ ದೇವಸ್ಥಾನದ ಟ್ರಸ್ಟಿಯಾಗಿದ್ದ ಸತೀಶ್ ಪ್ರಭು ಅವರು ಬಾಲ್ಯದಿಂದಲೇ ಸಂಘದ ಸ್ವಯಂಸೇವಕರು‌. ಸಂಘನಿಕೇತನದ ಗಣೇಶೋತ್ಸವ ಸಮಿತಿಯ ಕಾರ್ಯದರ್ಶಿಯಾಗಿ ಮುಂಚೂಣಿಯಲ್ಲಿದ್ದು ಸೇವಾ ಚಟುವಟಿಕೆ ನಡೆಸುತ್ತಿದ್ದರು. ಕುದ್ರೋಳಿಯಲ್ಲಿ ವಿವೇಕಾನಂದ ಪ್ರಿಂಟರ್ಸ್ ಎನ್ನುವ ಸಣ್ಣ ಮುದ್ರಣ ಸಂಸ್ಥೆಯನ್ನು ಹೊಂದಿದ್ದ ಸತೀಶ್ ಪ್ರಭು, ಅದರಲ್ಲೇ ಜೀವನ ತೃಪ್ತಿ ಕಂಡವರು. ಆರೆಸ್ಸೆಸ್, ಬಿಜೆಪಿಯಲ್ಲಿ ದೊಡ್ಡವರ ಸಂಪರ್ಕ ಇದ್ದರೂ, ಅದನ್ನು ಮುಂದಿಟ್ಟು ರಾಜಕೀಯ ಮಾಡಿದವರಲ್ಲ. ಕಳೆದ ಬಾರಿ ಬಿಜೆಪಿ ಒಳಗಡೆ ಅಸಮಧಾನಗೊಂಡು ಕೆಲವು ಸಮಯ ಪಕ್ಷವನ್ನು ತ್ಯಜಿಸಿ ಕಾಂಗ್ರೆಸ್ ಸೇರಿದ್ದರು. ಆದರೆ ಅಲ್ಲಿ ಒಗ್ಗಿಕೊಳ್ಳಲು ಸಾಧ್ಯವಾಗದೆ ಮತ್ತೆ ಮಾತೃಪಕ್ಷಕ್ಕೆ ಸೇರಿ ಸಕ್ರಿಯವಾಗಿದ್ದರು.

ಸತೀಶ್ ಪ್ರಭು ಅವರ ನಿಧನಕ್ಕೆ ಶಾಸಕ ವೇದವ್ಯಾಸ್ ಕಾಮತ್ ಕಂಬನಿ ಮಿಡಿದಿದ್ದಾರೆ. ನನ್ನ ಆತ್ಮೀಯರಾಗಿದ್ದ ಎಂ.ಸತೀಶ್ ಪ್ರಭು ರವರ ನಿಧನದ ಸುದ್ದಿಯು ಆಘಾತ ಸಹಿತ ತೀವ್ರ ನೋವುಂಟು ಮಾಡಿದೆ.
ಸಂಘನಿಕೇತನ ಗಣೇಶೋತ್ಸವ ಸಹಿತ ಜವಾಬ್ದಾರಿ ವಹಿಸಿಕೊಂಡ ಎಲ್ಲಾ ಸಾಮಾಜಿಕ-ಧಾರ್ಮಿಕ ಕ್ಷೇತ್ರಗಳಲ್ಲಿ ಅತ್ಯಂತ ಶಿಸ್ತು, ಸಂಯಮದಿಂದ ಕಾರ್ಯ ನಿರ್ವಹಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದರು. ಸದಾ ಹಸನ್ಮುಖಿಯಾಗಿ ಎಲ್ಲರೊಂದಿಗೂ ಆತ್ಮೀಯವಾಗಿ ಬೆರೆತು, ಕಿರಿಯ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಾ, ಪ್ರೇರಣಾದಾಯಿ ಬದುಕು ನಡೆಸಿದ ಅವರ ನೆನಪು ಎಂದಿಗೂ ಶಾಶ್ವತ. ಅವರ ಕುಟುಂಬ ವರ್ಗಕ್ಕೆ, ಬಂಧು ಮಿತ್ರರಿಗೆ, ಪಕ್ಷದ ಕಾರ್ಯಕರ್ತರಿಗೆ ಈ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ, ಹಾಗೂ ಮೃತರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

- Advertisement -

Latest News

error: Content is protected !!