Thursday, June 25, 2026
HomeWorldಇರಾನ್ ನಿಂದ ಬಹ್ರೈನ್‌ನಲ್ಲಿನ ಅಮೆರಿಕ ವಾಯುನೆಲೆ ಮೇಲೆ ದಾಳಿ

ಇರಾನ್ ನಿಂದ ಬಹ್ರೈನ್‌ನಲ್ಲಿನ ಅಮೆರಿಕ ವಾಯುನೆಲೆ ಮೇಲೆ ದಾಳಿ

- Advertisement -
- Advertisement -

ಇರಾನ್‌ ಸೇನೆಯು ಬಹ್ರೈನ್‌ನ ಶೇಖ್ ಈಸಾ ಪ್ರದೇಶದಲ್ಲಿರುವ ಅಮೆರಿಕದ ವಾಯುನೆಲೆಯನ್ನು ಗುರಿಯಾಗಿಸಿ ಬೃಹತ್ ಪ್ರಮಾಣದ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿರುವುದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹೇಳಿಕೊಂಡಿದೆ.

20 ಡ್ರೋನ್‌ಗಳು ಮತ್ತು ಮೂರು ಕ್ಷಿಪಣಿಗಳನ್ನು ಬಳಸಿಕೊಂಡು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಲಾಗಿದೆ ಎಂದು ಐಆರ್‌ಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ದಾಳಿಯಿಂದ ವಾಯುನೆಲೆಯ ಮುಖ್ಯ ಕಮಾಂಡ್ ಕೇಂದ್ರ ಹಾಗೂ ಪ್ರಧಾನ ಕಚೇರಿ ಕಟ್ಟಡ ಹಾನಿಗೊಳಗಾಗಿದ್ದು, ಇಂಧನ ಟ್ಯಾಂಕ್‌ ಗಳಿಗೆ ಬೆಂಕಿ ತಗುಲಿದೆಯೆಂದು ಎಂದು ವರದಿಯಾಗಿದೆ.

- Advertisement -

Latest News

error: Content is protected !!