Friday, August 28, 2026
Homeತಾಜಾ ಸುದ್ದಿಮಂಗಳೂರು: ಮನೆಯಿಂದ ಹೊರಗೆ ಹೋಗಿದ್ದ ಬಾಲಕಿ ವಾಪಾಸ್ ಬಾರದೆ ನಾಪತ್ತೆ

ಮಂಗಳೂರು: ಮನೆಯಿಂದ ಹೊರಗೆ ಹೋಗಿದ್ದ ಬಾಲಕಿ ವಾಪಾಸ್ ಬಾರದೆ ನಾಪತ್ತೆ

- Advertisement -
- Advertisement -

ಮಂಗಳೂರು: ಮನೆಯಿಂದ ಹೊರಗೆ ಹೋಗಿದ್ದ ಬಾಲಕಿ ವಾಪಾಸ್ ಬಾರದೆ ನಾಪತ್ತೆಯಾಗಿರುವ ಘಟನೆ ಕಾವೂರು ಜ್ಯೋತಿ ನಗರದಲ್ಲಿ ನಡೆದಿದೆ. ಇಲ್ಲಿನ ಬಾಡಿಗೆ ಮನೆಯಲ್ಲಿ ವಾಸವಿದ್ದ ಭೂಮಿಕಾ (17) ಅವರು ನಾಪತ್ತೆಯಾದಾಕೆ.

ಭೂಮಿಕಾ ಫೆ.12ರಂದು ಬೆಳಗ್ಗೆ 7 ಗಂಟೆಗೆ ಮನೆಯಿಂದ ಹೋದಾಕೆ ವಾಪಸ್ ಬಂದಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಎಲ್ಲ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಸುಮಾರು 5.2 ಅಡಿ ಎತ್ತರ, ಗೋಧಿ ಮೈ ಬಣ್ಣ, ಮಧ್ಯಮ ಶರೀರ, ಮನೆಯಿಂದ ಹೊರಗೆ ಹೋಗುವಾಗ ಪಿಂಕ್ ಬಣ್ಣದ ಚೂಡಿದಾರ್ ಧರಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಚಹರೆಯ ಬಾಲಕಿ ಪತ್ತೆಯಾದಲ್ಲಿ ಕಾವೂರು ಠಾಣೆಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!