Wednesday, June 3, 2026
Homeಕರಾವಳಿಉಡುಪಿಕಾರ್ಕಳ; ಬೈಕ್ ನಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ

ಕಾರ್ಕಳ; ಬೈಕ್ ನಿಂದ ಬಿದ್ದು ಮಹಿಳೆಗೆ ಗಂಭೀರ ಗಾಯ

- Advertisement -
- Advertisement -

ಕಾರ್ಕಳ; ಬೈಕ್ ನಿಂದ ಬಿದ್ದು ಮಹಿಳೆಗೆ ಗಂಭೀರ ಗಾಯಗಳಾಗಿರುವ ಘಟನೆ ಕಾರ್ಕಳ ಬೈಪಾಸ್ ಬಳಿ ನಡೆದಿದೆ. ಕಾರ್ಕಳ ತಾಲೂಕಿನ ಮರ್ಣೆ ಗ್ರಾಮದ ಅಜೆಕಾರು ಮದಗ ಬಳಿಯ ನಿವಾಸಿ ಪೂರ್ಣಿಮಾ ಪೂಜಾರಿ (40) ಗಾಯಗೊಂಡವರು. ಅವರನ್ನು ಉಡುಪಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪೂರ್ಣಿಮಾ ಅವರು ಕಾರ್ಕಳ ಆನೆಕೆರೆಯ ಖಾಸಗಿ ಶಾಲೆಯಲ್ಲಿ ಅಡುಗೆ ಸಹಾಯಕಿಯಾಗಿ ಕೆಲಸ ಮಾಡಿಕೊಂಡಿದ್ದು, ಶನಿವಾರ ಬೆಳಗ್ಗೆ ಕೆಲಸಕ್ಕೆ ತನ್ನ ಪರಿಚಯದ ರಾಜು ಶೆಟ್ಟಿ ಎಂಬವರ ಬೈಕಿನಲ್ಲಿ ಹೋಗುತ್ತಿದ್ದರು ಎನ್ನಲಾಗಿದೆ. ಈ ವೇಳೆ ಕಾರ್ಕಳ ಬೈಪಾಸ್ ಬಳಿ ಏಕಾಎಕಿ ಬೈಕಿನಿಂದ ಬಿದ್ದು ಗಾಯಗೊಂಡಿದ್ದರು.

ಈ ಅಪಘಾತದ ಕುರಿತು ಪೊಲೀಸ್ ಠಾಣೆಗೆ ಮಾಹಿತಿ ಸಿಕ್ಕಿಲ್ಲ ಹಾಗೂ ಗಾಯಗೊಂಡ ಪೂರ್ಣಿಮಾ ಅವರನ್ನು ಯಾರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನುವ ಮಾಹಿತಿ ಅವರ ಗಂಡನಿಗೆ ದೊರೆತಿಲ್ಲ. ಪೂರ್ಣಿಮಾ ಅವರ ನೆರೆಮನೆಯ ಮಹಿಳೆಯೊಬ್ಬರಿಗೆ ರಾಜು ಶೆಟ್ಟಿ ಎಂಬವರು ಕರೆ ಮಾಡಿ ಪೂರ್ಣಿಮಾ ಅವರು ಬಿದ್ದು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿಸಿದ್ದರು ಎಂದು ಪೂರ್ಣಿಮಾ ಅವರ ಪತಿ ಗುಣಪಾಲ ತಿಳಿಸಿದ್ದಾರೆ. ಬಿದ್ದ ರಭಸಕ್ಕೆ ಪೂರ್ಣಿಮಾ ಅವರ ತಲೆ,ಮುಖ ಹಾಗೂ ಬೆನ್ನಿಗೆ ಗಂಭೀರ ಪ್ರಮಾಣದ ಗಾಯಗಳಾಗಿವೆ. ಉಡುಪಿಯ ಆದರ್ಶ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೂರ್ಣಿಮಾ ಅವರ ಕೋಮಾ ಸ್ಥಿತಿಯಲ್ಲಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಕಳ ನಗರ ಠಾಣೆಯ ಪೊಲೀಸರು ಘಟನೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

- Advertisement -

Latest News

error: Content is protected !!