Thursday, June 4, 2026
Homeತಾಜಾ ಸುದ್ದಿ9 ರೂ. 34 ಪೈಸೆ ಸಾಲ ಪಾವತಿಗೆ ಸೂಚಿಸಿದ ಬ್ಯಾಂಕ್; 10 ರೂ. ಕಟ್ಟಿ 66...

9 ರೂ. 34 ಪೈಸೆ ಸಾಲ ಪಾವತಿಗೆ ಸೂಚಿಸಿದ ಬ್ಯಾಂಕ್; 10 ರೂ. ಕಟ್ಟಿ 66 ಪೈಸೆ ವಾಪಸಾತಿಗೆ ಪಟ್ಟು ಹಿಡಿದ ಗ್ರಾಹಕ

- Advertisement -
- Advertisement -

ಸಕಲೇಶಪುರ: ಗ್ರಾಹಕನ ಬಳಿ 9 ರುಪಾಯಿ 34 ಪೈಸೆ ಸಾಲ ಕಟ್ಟಿಸಿಕೊಂಡ ಬ್ಯಾಂಕ್ ನಲ್ಲಿ ಹತ್ತು ರೂಪಾಯಿ ಸಾಲ ಮರುಪಾವತಿ ಮಾಡಿ 66 ಪೈಸೆ ವಾಪಸ್ ಕೊಡಿ ಎಂದು ಗ್ರಾಹಕ ಪಟ್ಟು ಹಿಡಿದ ಘಟನೆ
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ನಡೆದಿದೆ.

ಸಕಲೇಶಪುರದ ಚೊಕ್ಕಣ್ಣ ಗೌಡ ಎಂಬ ಗ್ರಾಹಕ ಕೆನರಾ ಬ್ಯಾಂಕ್ ನಿಂದ ಐವತ್ತು ಸಾವಿರ ರೂಪಾಯಿ ಸಾಲ ಪಡೆದು ಬಡ್ಡಿ ಸಮೇತ ಮರು ಪಾವತಿ ಮಾಡಿದ್ದರೂ ಬುಧವಾರ ಬ್ಯಾಂಕ್ ನಿಂದ ಕರೆ ಮಾಡಿ 9 ರುಪಾಯಿ 34 ಪೈಸೆ ಸಾಲ ತೀರಿಸಲು ಸೂಚಿಸಿಲಾಗಿತ್ತು.‌

ಅದರಂತೆ ಚೊಕ್ಕಣ್ಣ ಗೌಡಸಕಲೇಶಪುರ ಪಟ್ಟಣದಲ್ಲಿರುವ ಕೆನರಾ ಬ್ಯಾಂಕ್ ಶಾಖೆಗೆ ಬಂದು ಹತ್ತು ರೂಪಾಯಿ ಹಣ ಪಾವತಿಸಿ 66 ಪೈಸೆ ವಾಪಸ್ ಕೊಡುವಂತೆ ಪಟ್ಟು ಹಿಡಿದಿದ್ದಾರೆ.

ಕೊನೆಗೆ ಬ್ಯಾಂಕ್ ಸಿಬ್ಬಂದಿ ಸಾಲ ವಾಪಸ್ ಕೇಳಿ ತಾವು ಕರೆ ಮಾಡಿಲ್ಲ, ಕಂಪ್ಯೂಟರ್ ಟೆಲಿ ಕಾಲ್ ನಿಂದ ಆಗಿದೆ ಎಂದು ಸಬೂಬು ಹೇಳಿ ಗ್ರಾಹಕ ಚೊಕ್ಕಣ್ಣ ಗೌಡರನ್ನು ಕಳುಹಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!