- Advertisement -
![]()
- Advertisement -
ಉಡುಪಿ: ಬಾಡಿಗೆ ಮನೆ ಕೆಳುವ ನೆಪದಲ್ಲಿ ಬಂದು ವೃದ್ಧೆಯ ಕತ್ತಿನಲ್ಲಿದ್ದ ಚಿನ್ನದ ಸರ ಕದ್ದು ಪರಾರಿಯಾದ ಘಟನೆ ಶನಿವಾರ ಬೆಳಗ್ಗೆ ಶಂಕರಪುರದಲ್ಲಿ ನಡೆದಿದೆ. ಹೆಲೆನ್ ಡಿಸೋಜಾ (70) ಸರ ಕಳೆದುಕೊಂಡ ವೃದ್ಧೆ
ಬೆಳಿಗ್ಗೆ 10 ಗಂಟೆ ಸುಮಾರಿಗೆ ಅವರು ಮನೆಯಲ್ಲಿದ್ದಾಗ ಮೂವರು ಯುವಕರು ಬೈಕ್ ನಲ್ಲಿ ಬಂದು ನೆರೆಹೊರೆಯಲ್ಲಿ ಬಾಡಿಗೆಗೆ ಲಭ್ಯವಿರುವ ಮನೆಗಳ ಬಗ್ಗೆ ವಿಚಾರಿಸಿದರು. ಬಳಿಕ ಮಹಿಳೆಯ ಮೊಬೈಲ್ ನಂಬರ್ ಕೇಳಿ ಬರೆಯುತ್ತಿದ್ದಂತೆ ಒಬ್ಬಾತ ಮಹಿಳೆಯ ಕೊರಳಲ್ಲಿದ್ದ ಸುಮಾರು 3 ಪವನ್ ತೂಕದ ಚಿನ್ನದ ಸರವನ್ನು ಕಸಿದು ಮನೆಯ ಕಂಪೌಂಡ್ ಹಾರಿದ್ದಾನೆ. ಉಳಿದ ಇಬ್ಬರು ಈತನೊಂದಿಗೆ ಸೇರಿ ಬೈಕ್ ನಲ್ಲಿ ಪರಾರಿಯಾಗಿದ್ದಾರೆ.
ಶಿರ್ವ ಪೊಲೀಸರು ಸ್ಥಳಕ್ಕಾಗಮಿಸಿ ತನಿಖೆ ನಡೆಸುತ್ತಿದ್ದಾರೆ. ಘಟನೆಯ ಸಿಸಿ ಫೂಟೇಜ್ ಲಭ್ಯವಾಗಿದ್ದು, ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
- Advertisement -


