Wednesday, June 24, 2026
Homeಕರಾವಳಿಮಂಗಳೂರುಬಂಟ್ವಾಳ; ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾತನ ಬಂಧನ, 180 ಗ್ರಾಂ ಗಾಂಜಾ ಪತ್ತೆ

ಬಂಟ್ವಾಳ; ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾತನ ಬಂಧನ, 180 ಗ್ರಾಂ ಗಾಂಜಾ ಪತ್ತೆ

- Advertisement -
- Advertisement -

ಬಂಟ್ವಾಳ; ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದಾತನನ್ನು ಬಂಧಿಸಿ ಪೊಲೀಸರು, 180 ಗ್ರಾಂ ಗಾಂಜ ವಶಪಡಿಸಿಕೊಂಡಿದ್ದಾರೆ. ಬಂಟ್ವಾಳ  ಮೇರಮಜಲು ನಿವಾಸಿ ಪ್ರಶಾಂತ್ @ ಪ್ರಸಾದ್ (30) ಬಂಧಿತ ಆರೋಪಿ.

ದಿನಾಂಕ: 19-02-2026 ರಂದು ಮಧ್ಯಾಹ್ನ ಸಮಯ, ಬಂಟ್ವಾಳ ತಾಲೂಕು ಕೊಡ್ಮಾಣು ಗ್ರಾಮದ ಪಕ್ಕಳಪಾದೆ ಎಂಬಲ್ಲಿ ರಸ್ತೆಯ  ಬದಿಯ ನಿರ್ಜನ ಜಾಗದಲ್ಲಿ ಒಬ್ಬಾತನು ನಿಷೇದಿತ ಮಾದಕ ವಸ್ತುವನ್ನು ಮಾರಾಟ ಮಾಡಿ, ಲಾಭ ಗಳಿಸುವ ಉದ್ದೇಶದಿಂದ ಅಕ್ರಮವಾಗಿ ವಶದಲ್ಲಿಟ್ಟುಕೊಂಡಿರುವುದಾಗಿ ಮಾಹಿತಿ ಬಂದ ಮೇರೆಗೆ, ಮಂಜುನಾಥ ಟಿ ಪೊಲೀಸ್ ಉಪ ನಿರೀಕ್ಷಕರು (ಕಾ&ಸು) ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆರವರು ಸಿಬ್ಬಂದಿಯೊಂದಿಗೆ ತೆರಳಿ ಆಸಾಮಿಯನ್ನು ಹಿಡಿದು ವಿಚಾರಿಸಿದಾಗ ತಾನು ಗಾಂಜಾವನ್ನು ಶೇಖರಿಸಿಟ್ಟು ಗಿರಾಕಿಗಳಿಗೆ ಮಾರಾಟ ಮಾಡಲು ಬಂದಿರುವುದಾಗಿ ತಿಳಿಸಿದ್ದಾನೆ. ತಪಾಸಣೆಯ ವೇಳೆ ಆತನ ಬಳಿ 180 ಗ್ರಾಂ ಗಾಂಜಾವನ್ನು ಪತ್ತೆಯಾಗಿರುತ್ತದೆ. ಅಲ್ಲದೇ ಗಾಂಜಾವನ್ನು ಆತನಿಗೆ  ಬಂಟ್ವಾಳದ ಪಲ್ಲಮಜಲುವಿನ ಅಬ್ದುಲ್ ರಜಾಕ್ ರವರು  ಗಿರಾಕಿಗಳಿಗೆ ಮಾರಾಟ ಮಾಡುವಂತೆ ತಿಳಿಸಿ ಕೊಟ್ಟಿರುತ್ತಾರೆ ಎಂಬುದಾಗಿ ತಿಳಿಸಿರುತ್ತಾನೆ. ಮುಂದಿನ ಕಾನೂನುಕ್ರಮಕ್ಕಾಗಿ ಆರೋಪಿತನನ್ನು ಸದ್ರಿ ಮಾದಕವಸ್ತು, ಆತನ ಬಳಿಯಿದ್ದ ದ್ವಿಚಕ್ರ ವಾಹನದೊಂದಿಗೆ ಸ್ವಾಧೀನಪಡಿಸಿ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

- Advertisement -

Latest News

error: Content is protected !!