ಬೆಳ್ತಂಗಡಿ: ಅಕ್ರಮವಾಗಿ ವಾಣಿಜ್ಯ ಕಟ್ಟಡದ ಕಾಮಗಾರಿ ರಾಜರೋಷವಾಗಿ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಅಕ್ರಮ ಕಟ್ಟಡ ಕಾಮಗಾರಿಗಳನ್ನು ನೋಡಿಕೋಡಿದ್ರೂ ಕಣ್ಣು ಮುಚ್ಚಿ ಕುಳಿತ್ತಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆಯಲ್ಲಿರುವ ಪ್ರಕಾಶ್ ಶೆಣೈ ಮಾಲೀಕತ್ವದ ‘ಶೆಣೈ ರೆಸ್ಟೋರೆಂಟ್’ ಹೊಸ ಕಾಮಗಾರಿಗೆ ಗ್ರಾಮ ಪಂಚಾಯತ್ ನಿಂದ ಅನುಮತಿ ಇಲ್ಲದಿದ್ದರೂ ರಾಜರೋಷವಾಗಿ ಕಾಮಗಾರಿ ಮಾಡುತ್ತಿದ್ದರೂ ಅಧಿಕಾರಿಗಳು ಸೈಲೆಂಟ್ ಅಗಿದ್ದಾರೆ.ಶೆಣೈ ರೆಸ್ಟೋರೆಂಟ್ ಜಾಗ ಕೆರೆಯ ಪರಂಬೋಕು ರಸ್ತೆ ಮಾರ್ಜಿನ್ ನಲ್ಲಿ ಇರುವುದು ಆರ್.ಟಿ.ಸಿ ಯಲ್ಲಿ ನಮೂದಿಸಲಾಗಿದೆ.

ಈ ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿ ವಾಣಿಜ್ಯ ಕಟ್ಟಡ ಅಥವಾ ಮನೆ ನಿರ್ಮಾಣ ಮಾಡಲು ಅವಕಾಶ ಇಲ್ಲದಿದ್ದರೂ ಅಧಿಕಾರಿಗಳು 94ಸಿ ಅಡಿಯಲ್ಲಿ ಹರೀಶ್ ಶೆಣೈ ಎಂಬವರ ಹೆಸರಿಗೆ 2015-16 ರಲ್ಲಿ ಜಾಗ ಮಂಜೂರು ಕೂಡ ಮಾಡಿಸಿಕೊಟ್ಟಿದ್ದಾರೆ. ಅಕ್ರಮವಾಗಿ ಹೊಸ ವಾಣಿಜ್ಯ ಕಟ್ಟಡ ಕಾಮಗಾರಿ ಕೆಲಸಗಳು ಪೂರ್ಣಗೊಳ್ಳುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯತ್ ನಿಂದ ಅನುಮತಿ ಇಲ್ಲ ಎಂದು ದಾಖಲೆಗಳ ಮೂಲಕ ದೃಢ ಪಟ್ಟಿದೆ.ಈ ಅಕ್ರಮ ಕಟ್ಟಡವಾಗಿರುವ ಶೆಣೈ ರೆಸ್ಟೋರೆಂಟ್ ಗೆ ಹಲವು ಸರಕಾರಿ ಅಧಿಕಾರಿಗಳು ಬಂದು ಊಟ ಮಾಡಿಕೊಂಡು ಹೋಗುತ್ತಿದ್ದಾರೆ.

ಈ ಬಗ್ಗೆ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ವರದಿ ಮಾಡಿದ್ದರೂ ಅಕ್ರಮಗಳನ್ನು ನಿಲ್ಲಿಸಬೇಕಾದ ಕುವೆಟ್ಟು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಇಮ್ತಿಯಾಜ್ ಹಾಗೂ ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಭವನಿ ಶಂಕರ್ ರವರು ಮಾತ್ರ ಈ ಅಕ್ರಮ ಕಾಮಗಾರಿ ಕೆಲಸದ ಬಗ್ಗೆ ಮೌನವಾಗಿರುವುದು ಮಾತ್ರ ಹಲವು ಅನುಮಾನಗಳಿಗೆ ಕಾರಣವಾಗುತ್ತಿದೆ.


