ಬೆಳ್ತಂಗಡಿ; ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬಂದಾರು ಗ್ರಾಮದಲ್ಲಿ ಫೆ.18 ರಂದು ನಡೆದ ಸ್ಪೋಟಕ ವಸ್ತು ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಕರಣದ ವಿವರ; ದಿನಾಂಕ: 18.02.2026 ರಂದು ಸಂಜೆ, ಪ್ರಕರಣದ ಬೆಳ್ತಂಗಡಿ ನಿವಾಸಿ ಜಯಶ್ರೀ (38) ಎಂಬವರ ಇಬ್ಬರು ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಾಗ, ಅಂಗಳದಲ್ಲಿ ಚೆಂಡಿನಕಾರದ ಪ್ಲಾಸ್ಟಿಕ್ ಕಟ್ಟೊಂದು ಬಿದ್ದುಕೊಂಡಿದ್ದು, ಅವರ ಮಕ್ಕಳು ಸದ್ರಿ ಪ್ಲಾಸ್ಟಿಕ್ ಕಟ್ಟಿನಲ್ಲಿ ಆಟವಾಡುವ ವೇಳೆ, ಅದು ಸಿಡಿದು ಹೊಗೆ ಬಂದು ಕಲ್ಲಿನ ಚೂರುಗಳು ಜಯಶ್ರೀ ಅವರ ಮಗನ ಪೈಕಿ ಓರ್ವನ ಕಾಲಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಸ್ಪೋಟಕ ವಸ್ತುವನ್ನು ಪರಿಶೀಲಿಸಿ ಇತರರೊಂದಿಗೆ ವಿಚಾರಿಸಲಾಗಿ, ಸ್ಪೋಟಗೊಂಡ ವಸ್ತು ಯಾರೋ ಕಿಡಿಗೇಡಿಗಳು ಯಾವುದೋ ಕಾಡು ಪ್ರಾಣಿಗಳ ಬೇಟೆಗಾಗಿ ಇಟ್ಟಿರುವ ಸ್ಟೋಟಕವೆಂದು ಹಾಗೂ ಆ ಸ್ಫೋಟಕವನ್ನು ನಾಯಿಗಳು ಮನೆಯ ಅಂಗಳಕ್ಕೆ ತಂದು ಹಾಕಿರಬಹುದಾಗಿ ತಿಳಿದುಬಂದಿರುತ್ತದೆ. ಗಾಯಾಳು ಬಾಲಕನನ್ನು ಚಿಕಿತ್ಸೆಗಾಗಿ ಸ್ಥಳೀಯ ಅಸ್ವತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದಾಗಿ ನೀಡಿದ ದೂರಿನ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲಿ ಅ.ಕ್ರ: 09/2026, ಕಲಂ: 9(B)(1)(b) explosive Avt 1884 And 125(A) ಬಿಎನ್ಎಸ್-2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.


