Friday, June 26, 2026
Homeಕರಾವಳಿಮಂಗಳೂರುಪುತ್ತೂರು: ಕುಖ್ಯಾತ ಡ್ರಗ್ ಪೆಡ್ಲರ್ ಕೇರಳದ ಮಹಮ್ಮದ್ ಅಜ್ಮಲ್‌ ಯಾನ್ ಅಜ್ಜು ಬಂಧನ; ಪಟಾಕಿ ಸಿಡಿಸಿ...

ಪುತ್ತೂರು: ಕುಖ್ಯಾತ ಡ್ರಗ್ ಪೆಡ್ಲರ್ ಕೇರಳದ ಮಹಮ್ಮದ್ ಅಜ್ಮಲ್‌ ಯಾನ್ ಅಜ್ಜು ಬಂಧನ; ಪಟಾಕಿ ಸಿಡಿಸಿ ಸಂಭ್ರಮಿಸಿದ ಊರಿನ ಜನ

- Advertisement -
- Advertisement -

ಪುತ್ತೂರು: ಕುಖ್ಯಾತ ಡ್ರಗ್ ಪೆಡ್ಲರ್ ಕೇರಳದ ಮಹಮ್ಮದ್ ಅಜ್ಮಲ್‌ ಯಾನ್ ಅಜ್ಜು  ಬಂಧನವಾಗುತ್ತಿದ್ದಂತೆ ಆತನ ಊರಿನಲ್ಲಿ ಸಂಭ್ರಮ ಮುಗಿಲು ಮುಟ್ಟಿದೆ. ಊರಿನ ಜನ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಈ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಅಕ್ರಮವಾಗಿ ಎಂಡಿಎಂಎ ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಪುತ್ತೂರು ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಅದರಲ್ಲಿ ಕೇರಳದ ಕೋಝಿಕೋಡ್ ನ ಮುಹಮ್ಮದ್ ಅಜ್ಮಲ್ ಸಿ ಯಾನೆ ಅಜ್ಜು ಕೂಡ ಒಬ್ಬ. ಈತನ ಮೇಲೆ ಈಗಾಗಲೇ ಕೇರಳದಲ್ಲೂ ಕೂಡ ಡ್ರಗ್ಸ್ ಸರಬರಾಜಿಗೆ ಸಂಬಂಧಿಸಿದಂತೆ ಹಲವು ಪ್ರಕರಣಗಳು ದಾಖಲಾಗಿದೆ.


ಇದೀಗ ಪುತ್ತೂರು ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದು, ಈ ಸುದ್ದಿ ಕೇಳಿ ಆರೋಪಿ ಮಹಮ್ಮದ್ ಅಜ್ಮಲ್‌ ಊರಿನ ಜನ ಸಂಭ್ರಮಿಸಿದ್ದಾರೆ. ಕೋಝಿಕೋಡ್ ನ ವಡಕರ್ ತಾಲೂಕಿನ ವೇಲಂ ಗ್ರಾಮದ ಚೆನ್ನಿಲೋಟ್ಟು ಗ್ರಾಮದ ನಿವಾಸಿಯಾಗಿದ್ದ ಅಜ್ಮಲ್ ಯಾನೆ ಅಜ್ಜುಊರಿಗೆ ಮಾರಿಯಂತಿದ್ದ, ಊರಿನ‌ ಯುವಕರಿಗೆ ಮಾದಕವಸ್ತು ಪೂರೈಸಿ ಜೀವನ ಹಾಳು ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಕೇರಳದಲ್ಲೂ ಈತನ ಮೇಲೆ ಹಲವು ಪ್ರಕರಣಗಳು ದಾಖಲಾಗಿದ್ದರು, ಕೇರಳದ ಪೋಲೀಸರ ಕೈಗೆ ಸಿಗದೆ ತಿರುಗಾಡುತ್ತಿದ್ದ . ಇದೀಗ ಡ್ರಗ್ಸ್ ಕೇಸ್ ನಲ್ಲಿ ನಿನ್ನೆ ಪುತ್ತೂರು ಗ್ರಾಮಾಂತರ ಪೋಲೀಸರ ಕೈಗೆ ಅಜ್ಮಲ್ ಸಿಕ್ಕಿಬಿದಿದ್ದಾನೆ. ಈ ವಿಚಾರ ತಿಳಿಯುತ್ತಿದ್ದಂತೆ ಅಜ್ಮಲ್ ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಲಾಗಿದೆ. ಅಲ್ಲದೆ ದಕ್ಷಿಣಕನ್ನಡ ಜಿಲ್ಲೆಯ ಪೊಲೀಸರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ ಎನ್ನಲಾಗಿದೆ.

- Advertisement -

Latest News

error: Content is protected !!