- Advertisement -
![]()
- Advertisement -
ಬೆಳ್ತಂಗಡಿ ಹೋಬಳಿ ಕಂದಾಯ ನಿರೀಕ್ಷಕ ಹೆಚ್ ಆರ್ ಪ್ರತೀಶ್ ಅವರು ಉಪ ತಹಸೀಲ್ದಾರ್ ಆಗಿ ಭಡ್ತಿ ಹೊಂದಿ ಬಂಟ್ವಾಳ ತಾಲೂಕಿಗೆ ಫೆ.18 ರಂದು ವರ್ಗಾವಣೆಗೊಂಡಿದ್ದಾರೆ.
ಇವರು ಬೆಳ್ತಂಗಡಿ ತಾಲೂಕಿನಲ್ಲಿ ಕಳೆದ 23 ವಷಗಳಿಂದ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾರಾವಿಗೆ ಗ್ರಾಮ ಆಡಳಿತ ಅಧಿಕಾರಿಯಾಗಿ ನೇಮಕಗೊಂಡು ವೃತ್ತಿ ಜೀವನ ಆರಂಭಿಸಿದ ಇವರು ಕಳೆದ ಆರು ವಷಗಳಿಂದ ಕಂದಾಯ ನಿರೀಕ್ಷಕರಾಗಿ ತಾಲೂಕಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಇವರು ಮೂಲತ ಹಾಸನ ಜಿಲ್ಲೆಯ ಹೊಳೆನರಸಿಪುರದವರು.
- Advertisement -


