Thursday, June 4, 2026
Homeಕರಾವಳಿಓಡಿಲ್ನಾಳ ಸುಮಂತ್ ಕೊಲೆ ಪ್ರಕರಣ; ಗೃಹ ಸಚಿವರನ್ನು ಭೇಟಿ ಮಾಡಿದ ಪೋಷಕರು

ಓಡಿಲ್ನಾಳ ಸುಮಂತ್ ಕೊಲೆ ಪ್ರಕರಣ; ಗೃಹ ಸಚಿವರನ್ನು ಭೇಟಿ ಮಾಡಿದ ಪೋಷಕರು

- Advertisement -
- Advertisement -

ಬೆಳ್ತಂಗಡಿ: ಮಂಗಳೂರಿನಲ್ಲಿ ಕರ್ನಾಟಕ ಸರಕಾರದ ಗೃಹ ಸಚಿವರಾದ ಮಾನ್ಯ ಡಾ.ಜಿ.ಪರಮೇಶ್ವರವರನ್ನು ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ಎಂಬಲ್ಲಿ ಗೇರುಕಟ್ಟೆ ಪ್ರೌಢ ಶಾಲೆಯ 9ನೇ ತರಗತಿಯ ಪ್ರತಿಭಾನ್ವಿತ ವಿದ್ಯಾರ್ಥಿ ಸುಮಂತ್ ನಾಳ ದೇವಸ್ಥಾನಕ್ಕೆ ಧನುಪೂಜೆಗೆ ಹೋಗುವ ತೋಟದ ಕೆರೆಯಲ್ಲಿ ಶವವಾಗಿ ಜ.14 ರಂದು ಪತ್ತೆಯಾಗಿರುವ ಪ್ರಕರಣದ ತನಿಖೆಯು ನಿಧಾನಗತಿಯಲ್ಲಿ ಸಾಗುತ್ತಿದೆ,ಕೂಡಲೇ ಆರೋಪಿಗಳನ್ನು ಪತ್ತೆಹಚ್ಚಿ ನಮಗೆ ನ್ಯಾಯ ದೊರಕಿಸಿಕೊಡಬೇಕೆಂದು ಬಾಲಕನ ಪೋಷಕರು ಫೆ.17 ರಂದು ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.

ಮಾನ್ಯ ಸಚಿವರು ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿಯಾದ ಶ್ರೀ ಅರುಣ್ ಕುಮಾರ್ ರವರನ್ನು ಮತ್ತು ಪಶ್ಚಿಮ ವಲಯದ ಪಶ್ಚಿಮ ವಲಯದ ಐಜಿಪಿ ಶ್ರೀ ಅಮಿತ್ ಸಿಂಗ್ ರವರಿಂದ ಎಲ್ಲಾ ತನಿಕ ವರದಿಯನ್ನು ಕೇಳಿ ತಿಳಿದುಕೊಂಡುರು. ಮಾನ್ಯ ಅರುಣ್ ಕುಮಾರ್ ರವರು ಪ್ರತ್ಯೇಕ ತಂಡ ಇಲ್ಲಿಯವರೆಗೆ ಮಾಡಿರುವ ತನಿಕೆಯ ಪ್ರಗತಿ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದರು. ಮಾನ್ಯ ಸಚಿವರು ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸುವುದರ ಬಗ್ಗೆ ನಿರ್ದೇಶನವನ್ನು ನೀಡಿದರು ಮತ್ತು ನೊಂದ ಪೋಷಕರಿಗೆ ಸಾಂತ್ವನ ಕೂಡ ಹೇಳಿದರು.

ಈ ಸಂದರ್ಭದಲ್ಲಿ ನಾಳ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಕುಮಾರ್ ಮತ್ತಿತರರು ಹಾಜರಿದ್ದರು.

- Advertisement -

Latest News

error: Content is protected !!