- Advertisement -
![]()
- Advertisement -
ಬಾಲಿವುಡ್ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಮದುವೆ ಫೆ.26 ರಂದು ರಾಜಸ್ಥಾನದಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ಈ ನಿಟ್ಟಿನಲ್ಲಿ ದೊಡ್ಡಮಟ್ಟದ ತಯಾರಿ ನಡೆಯುತ್ತಿದೆ.
ಫೆ.24ರಿಂದಲೇ ವಿವಾಹ ಸಂಬಂಧಿತ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಮದುವೆಯು ಆತ್ಮೀಯರ ಸಮ್ಮುಖದಲ್ಲಿ ಮಾತ್ರವೇ ನಡೆಯಲಿದೆ ಎಂದು ತಿಳಿದು ಬಂದಿದೆ.
ಮದುವೆಗೆ ಬರುವ ಅತಿಥಿಗಳು ಮೊಬೈಲ್ ತರುವಂತಿಲ್ಲ. ಮೊಬೈಲ್ ಬಳಕೆ ತಡೆಯಲು ಒಂದು ತಂಡವಿರಲಿದೆ. ಆ ತಂಡ ಅತಿಥಿಗಳನ್ನು ಪರಿಶೀಲಿಸಲಿದೆ.
ಇನ್ನು ನಟ ಹಾಗೂ ನಟಿಯ ಮದುವೆ ಫೋಟೋ – ವಿಡಿಯೋಗಳನ್ನು ಲೀಕ್ ಆಗದಂತೆ ನೋಡಿಕೊಳ್ಳಲು ಪ್ರತ್ಯೇಕವಾದ ತಂಡವಿರಲಿದ್ದು, ಆ ತಂಡವೇ ಮದುವೆ ಫೋಟೋ – ವಿಡಿಯೋಗಳನ್ನುಸೆರೆ ಹಿಡಿಯಲಿದೆ ಮತ್ತು ಎಲ್ಲೂ ಕೂಡ ಫೋಟೋಸ್‌ಗಳನ್ನು ಹಂಚಿಕೊಳ್ಳುವಂತಿಲ್ಲ ಎಂದು ಒಪ್ಪಂದ ಮಾಡಿಕೊಂಡು ಸಹಿ ಹಾಕಿಸಿಕೊಳ್ಳಲಾಗುತ್ತದೆ.
- Advertisement -


