Friday, August 28, 2026
Homeಕರಾವಳಿನೆಲ್ಲಿಕಾರು ರಸ್ತೆ ಅಭಿವೃದ್ಧಿಗೆ 1.50 ಕೋಟಿ ಅನುದಾನ; ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಉಮಾನಾಥ...

ನೆಲ್ಲಿಕಾರು ರಸ್ತೆ ಅಭಿವೃದ್ಧಿಗೆ 1.50 ಕೋಟಿ ಅನುದಾನ; ರಸ್ತೆ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ ಶಾಸಕ ಉಮಾನಾಥ ಎ. ಕೋಟ್ಯಾನ್

- Advertisement -
- Advertisement -

ಮೂಡುಬಿದಿರೆ: ಶಾಸಕ ಉಮಾನಾಥ ಎ. ಕೋಟ್ಯಾನ್ ಮಂಗಳವಾರದಂದು ನೆಲ್ಲಿಕಾರು ಗ್ರಾಪಂನ ಗುಂಡಾವುನಲ್ಲಿ ಶಿತಾ೯ಡಿ-ಗುಂಡಾವು-ನೆಲ್ಲಿಕಾರು ಮುಖ್ಯ ರಸ್ತೆ 1.50 ಕೋ.ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವುದಕ್ಕೆ ಶಿಲಾನ್ಯಾಸ ನೆರವೇರಿಸಿದರು.

ನಂತರದಲ್ಲಿ ಮಾತನಾಡಿದ ಅವರು, ʻಶಿರ್ತಾಡಿ-ಹೊಸ್ಮಾರು ರಸ್ತೆಯು ಗುಂಡಾವಿನಂದ ತೀರ ಹದಗೆಟ್ಟಿದ್ದು ಇದನ್ನು ದುರಸ್ತಿಗೊಳಿಸಬೇಕೆಂಬುದು ಈ ಭಾಗದ ಜನರ ಬಹು ದಿನದ ಬೇಡಿಕೆಯಾಗಿತ್ತು. ಆ ಕೆಲಸ ಇದೀಗ ನೆರವೇರಿದ್ದು, ಈ ಕಾಮಗಾರಿಗೆ 1.50 ಕೋ.ರೂ. ಅನುದಾನ ಬಿಡುಗಡೆಯಾಗಿದ್ದು, ಈ ನಿಟ್ಟಿನಲ್ಲಿ 1.2 ಕಿ.ಮೀ. ಉದ್ದಕ್ಕೆ 5.5 ಮೀ. ಅಗಲೀಕರಣಗೊಳಿಸಲಾಗುವುದು ಕಾಮಗಾರಿಯನ್ನು ತಕ್ಷಣ ಆರಂಭಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ನೆಲ್ಲಿಕಾರು ಗ್ರಾಪಂನ ಮಾಜಿ ಅಧ್ಯಕ್ಷರಾಗಿದ್ದ ಉದಯ ಪೂಜಾರಿ, ಜಯಂತ ಹೆಗ್ಡೆ, ಮಾಜಿ ಉಪಾಧ್ಯಕ್ಷೆ ಸುಶೀಲಾ, ಸದಸ್ಯರಾದ ಸುಶೀಲಾ, ಆಶಾಲತಾ, ಊರಿನ ಹಿರಿಯರಾದ ಶಿವಪ್ಪ ಪೂಜಾರಿ, ಜಯ ಪೂಜಾರಿ, ಕಮಲ ಪೂಜಾರ್ತಿ, ಸ್ಥಳೀಯರಾದ ಗಣೇಶ್ ನೆಲ್ಲಿಕಾರು, ರಾಘು ಪೂಜಾರಿ ನೆಲ್ಲಿಕಾರು, ರಾಕೇಶ್ ಪೂಜಾರಿ ಮತ್ತು ಗುತ್ತಿಗೆದಾರರು ಉಪಸ್ಥಿತರಿದ್ದರು.

- Advertisement -

Latest News

error: Content is protected !!