- Advertisement -
![]()
- Advertisement -
ಮಂಗಳೂರು: ನಂತೂರಿನಲ್ಲಿ ಯುವತಿಯನ್ನು ಬಲಿ ಪಡೆದಿದ್ದ ಬಸ್ ನಿಂದ ಮತ್ತೊಂದು ಅಪಘಾತವಾಗಿದೆ. ಸೋಮವಾರಮತ್ತೆ ಗುರುಪುರ ಕೈಕಂಬದಲ್ಲಿ ಬೈಕ್ ವೊಂದಕ್ಕೆ ಢಿಕ್ಕಿಯಾಗಿದೆ.
ಸೋಮವಾರ ಮಧ್ಯಾಹ್ನ ವಾಮಂಜೂರು ಮೂಲಕ ಕೈಕಂಬಕ್ಕೆ ಹೋಗಿದ್ದ ಬಸ್ ಬೈಕ್ ಗೆ ಢಿಕ್ಕಿಯಾದ ಪರಿಣಾಮ ಬೈಕ್ ಬಸ್ ನಡಿಗೆ ಬಿದ್ದಿದೆ. ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದಾರೆ. ಪ್ರಕರಣ ದಾಖಲಾಗಿಲ್ಲ.
ಕಳೆದ ಬುಧವಾರ ಸ್ಕೂಟರ್ ಗೆ ಢಿಕ್ಕಿಪಡಿಸಿದ್ದ ಚಾಲಕ ಸೋಮವಾರ ಚಾಲನೆ ಮಾಡುತ್ತಿರಲಿಲ್ಲ. ನಂತೂರು ಘಟನೆ ಬಳಿಕ ಆ ಚಾಲಕನನ್ನು ಬಂಧಿಸಲಾಗಿತ್ತು.
- Advertisement -


