Wednesday, June 24, 2026
Homeಕರಾವಳಿಮಂಗಳೂರುಕ್ಷೀಪ್ರ ಕಾರ್ಯಾಚರಣೆಯನ್ನು ನಡೆಸಿ ನಗದು ಕಳವು ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸಿದ ಮಂಗಳೂರು ಪೊಲೀಸರು

ಕ್ಷೀಪ್ರ ಕಾರ್ಯಾಚರಣೆಯನ್ನು ನಡೆಸಿ ನಗದು ಕಳವು ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಬಂಧಿಸಿದ ಮಂಗಳೂರು ಪೊಲೀಸರು

- Advertisement -
- Advertisement -

ಮಂಗಳೂರು: ಕ್ಷೀಪ್ರ ಕಾರ್ಯಾಚರಣೆಯನ್ನು ನಡೆಸಿ ನಗದು ಕಳವು ಪ್ರಕರಣವನ್ನು ಬೇಧಿಸಿ ಆರೋಪಿಯನ್ನು ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಝಾಕೀರ್ ಹುಸೈನ್ @ ಜಾಕಿ (38) ಬಂಧಿತ ಆರೋಪಿ.

ಪ್ರಕರಣದ ವಿವರ: ಮಹಮ್ಮದ್ ನಿಜಾಮುದ್ದಿನ್  ಎಂಬವರು  ದಿನಾಂಕ 07/02/2026  ರಂದು ಶ್ರೀಧರ ಆಳ್ವರವರಿಗೆ ಸೇರಿದ ಅಡಿಕೆಯನ್ನು ಟಾಟಾ ಇಂಟ್ರಾ ವಾಹನದಲ್ಲಿ  ತುಂಬಿಸಿಕೊಂಡು ಬೀಭಿ ಅಲಾಬಿಯಲ್ಲಿರುವ  ಅಂಬಾರ ಸುಪಾರಿ ಅಂಗಡಿಗೆ ಮಾರಾಟ ಮಾಡಿ  ಅವರು ನೀಡಿದ ರೂ 1,28740/- ನ್ನು ತನ್ನ  ವಾಹನದ ಡ್ಯಾಶ್ ಬೋರ್ಡ್ ನಲ್ಲಿಟ್ಟು,  ವಾಹನವನ್ನು ಚಲಾಯಿಸಿಕೊಂಡು  10.30  ಗಂಟೆಗೆ   ಬಂದರ್ ನ ಜೆ.ಎಂ.ರೋಡ್ ನಲ್ಲಿರುವ ಸದರ್ನ್  ಏಜೆನ್ಸಿಯಲ್ಲಿ ಎಸಿಪಿ ಶೀಟ್ ಖರೀದಿ ಮಾಡಿ  ವಾಹನದಲ್ಲಿ ಕುಳಿತು  ಡ್ಯಾಶ್ ಬೋರ್ಡ್ ತೆರೆದಿದ್ದಾರೆ. ಆಗ  ಅದರಲ್ಲಿಟ್ಟಿದ್ದ ರೂ 1,28740/- ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬ್ರ 18/2026 ಕಲಂ 303(2)   ಬಿ.ಎನ್.ಎಸ್ ಯಂತೆ ಪ್ರಕರಣ ದಾಖಲಾಗಿತ್ತು.   

ಅದರಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ ಸಚಿನ್ ಕುಮಾರ್,  ಪೊಲೀಸ್ ಉಪ ನಿರೀಕ್ಷಕರಾದ ಶ್ರೀ ಶೀತಲ್ ಅಲಗೂರು,  ಎ,ಎಸ್,ಐ ಗಳಾದ ಶಶಿಧರ, ದಾಮೋದರ್ ಹಾಗೂ ಉತ್ತರ ಪೊಲೀಸ್ ಠಾಣಾ ಸಿಬ್ಬಂದಿಯನ್ನು ಒಳಗೊಂಡ ತಂಡ ದಿನಾಂಕ: 08.02.2026 ರಂದು ಪ್ರಕರಣದ ಆರೋಪಿ ಝಾಕೀರ್ ಹುಸೈನ್ @ ಜಾಕಿ,  ಪ್ರಾಯ 38 ವರ್ಷ  ವಾಸಃ ಕಸಬ ಬೆಂಗ್ರೆ ಮಂಗಳೂರು ಹಾಲಿಃ ಜಪ್ಪು ಮಾರ್ಕೆಟ್  ಹತ್ತಿರ, ಗುಜ್ಜರೆ ಕೆರೆ ಜಪ್ಪು, ಮಂಗಳೂರು ಎಂಬಾತನನ್ನು ನಗರದ ಮಣ್ಣಗುಡ್ಡ ಜಂಕ್ಷನ್  ಬಳಿ ವಶಕ್ಕೆ ಪಡೆದು ಕಳವು ಮಾಡಿದ ನಗದು ಹಣ ರೂ. 70,000/-,  ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ, ಕಳ್ಳತನದ ಹಣದಿಂದ ಖರೀದಿಸಿದ ವಿವೋ ಕಂಪನಿಯ ಮೊಬೈಲ್ ಪೋನ್ ನ್ನು ಸ್ವಾಧೀನಪಡಿಸಲಾಗಿದೆ.

ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಆರೋಪಿತನ ವಿರುದ್ದ ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ರಾತ್ರಿ ಮನೆ ಕಳವು ಪ್ರಕರಣದಲ್ಲಿ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ವ್ಯಾಪ್ತಿಯಲ್ಲಿ ಅಟೋರಿಕ್ಷಾದ ಶೀಟ್ ನಲ್ಲಿ ಇಟ್ಟಿದ ನಗದು ಹಣವನ್ನು ಕಳವು ಮಾಡಿದ  ಪ್ರಕರಣದ ಆರೋಪಿತನಾಗಿರುತ್ತಾನೆ.

- Advertisement -

Latest News

error: Content is protected !!