ಮುಲ್ಕಿ: ಬಿಲ್ಲವ ಹಿವರ್ಧಕ ಸಂಘದ ಸಂಚಾಲಕತ್ವದ ಸಸಿಹಿತ್ಲು ಸಾರಂತಾಯಗರೋಡಿ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ರವಿವಾರ ನಡೆದಿದ್ದು, ಸಮಾರಂಭದಲ್ಲಿ ನಿಪ್ಪಾಣಿ ಓಂ ಶಕ್ತಿ ಪೀಠದ ಮಹಾಕಾಳಿ ಮಹಾ ಸಂಸ್ಥಾನದ ಸದರ್ಮದ ಪೀಠಾಧ್ಯಕ್ಷ ಶ್ರೀಶ್ರೀ ಅರುಣಾನಂದ ತೀರ್ಥ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು.
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ಸೀಮೆಯ ಅರಸು ದುಗ್ಗಣ್ಣ ಸಾವಂತರು ವಹಿಸಿದ್ದರು.
ಸಸಿಹಿತ್ಲು ಸಾರಂತಾಯಗರೋಡಿ ದೈವಸ್ಥಾನದ ಬ್ರಹ್ಮಕಲಶೋತ್ಸವದ ಕುರಿತ ಸ್ಮರಣ ಸಂಚಿಕೆ “ಬ್ರಹ್ಮತೀರ್ಥ”ವನ್ನು ಉದ್ಯಮಿ ಗಣೇಶ್ ಆರ್. ಪೂಜಾರಿ ಮತ್ತು ಅತಿಥಿಗಣ್ಯರು ಬಿಡುಗಡೆ ಗೊಳಿಸಿದರು. ನಂತರದಲ್ಲಿ ದೈವಸ್ಥಾನದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಶ್ರಮಿಸಿದ ಸಮಿತಿಯ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುನರ್ ಪ್ರತಿಷ್ಠಾ ಬ್ರಹಕಲಶೋತ್ಸವದ ವೈದಿಕ ಕೈಂಕರ್ಯ ನೆರವೇರಿಸಿದ ವೇದ ಮೂರ್ತಿ ರಂಗನಾಥ ಭಟ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಸೂರ್ಯಕಾಂತ್ ಜೆ. ಸುವರ್ಣ, ಮುಂಬೈ ಭಾರತ್ ಬ್ಯಾಂಕ್ ನಿರ್ದೇಶಕ ಗಂಗಾಧರ ಜೆ. ಪೂಜಾರಿ, ಉದ್ಯಮಿಗಳಾದ ಪದ್ಮನಾಭ ಬಂಗೇರ, ಸದಾಶಿವ ಸಾಲ್ಯಾನ್, ಧನಂಜಯ ಶೆಟ್ಟಿ, ಗಣೇಶ್ ಆರ್.ಪೂಜಾರಿ, ಮುಂಬೈ ಭಾರತ್ ಬ್ಯಾಂಕ್ ನಿರ್ದೇಶಕ ಭಾಸ್ಕರ ಸಾಲ್ಯಾನ್, ಕಾಂತುಲಕಣ ಗಡಿಪ್ರದಾನ ಪಠೇಲರ ಮನೆತನದ ಪ್ರತಿನಿಧಿ ಲೀಲಾಧರ ಬಂಗೇರ, ನಮ್ಮ ಕುಡ್ಲ ವಾಹಿನಿ ಮಾಲಕರಾದ ಲೀಲಾಕ್ಷ ಕರ್ಕೇರ, ಹಳೆಯಂಗಡಿ ಪ್ರಿಯದರ್ಶಿನಿ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ವಸಂತ ಬೆರ್ನಾಡ್,
ಮಾಜಿ ಮುಜರಾಯಿ ಸಚಿವರಾದ ನಾಗರಾಜ ಶೆಟ್ಟಿ, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ್ ಕೋಟ್ಯಾನ್, ಯತೀಶ್ ಬೈಕಂಪಾಡಿ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಸಿ.ಬಿ. ಕರ್ಕೇರ, ಜಗನ್ನಾಥ ಕೋಟ್ಯಾನ್, ಅನಿಲ್‌ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.


