Saturday, June 6, 2026
Homeಅಪರಾಧನಟ ವಿಜಯ್‌ಗೆ ಹೈಕೋರ್ಟ್ ಶಾಕ್: 1.5 ಕೋಟಿ ರೂ. ದಂಡ ವಿಧಿಸಿದ್ದ ಐಟಿ ಇಲಾಖೆಯ ಆದೇಶ...

ನಟ ವಿಜಯ್‌ಗೆ ಹೈಕೋರ್ಟ್ ಶಾಕ್: 1.5 ಕೋಟಿ ರೂ. ದಂಡ ವಿಧಿಸಿದ್ದ ಐಟಿ ಇಲಾಖೆಯ ಆದೇಶ ಎತ್ತಿ ಹಿಡಿದ ನ್ಯಾಯಾಲಯ

- Advertisement -
- Advertisement -

ನಟ ಹಾಗೂ ತಮಿಳಗ ವೆಟ್ರಿ ಕಳಗಂ ಪಕ್ಷದ ಮುಖ್ಯಸ್ಥ ವಿಜಯ್ ಅವರಿಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದ್ದು, 2015–16ನೇ ಸಾಲಿನಲ್ಲಿ ಆದಾಯ ಘೋಷಣೆ ಮಾಡದಿದ್ದಕ್ಕೆ
ಆದಾಯ ತೆರಿಗೆ ಇಲಾಖೆಯು ವಿಧಿಸಿದ್ದ 1.5 ಕೋಟಿ ರೂ. ದಂಡದ ಕ್ರಮವನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

ಪ್ರಕರಣದ ವಿವರ: ಆದಾಯ ತೆರಿಗೆ ಇಲಾಖೆಯು 2015–16ನೇ ಸಾಲಿನಲ್ಲಿ 15 ಕೋಟಿ ರೂ. ಹೆಚ್ಚುವರಿ ಆದಾಯವನ್ನು ಸೂಕ್ತವಾಗಿ ಬಹಿರಂಗಪಡಿಸದ ಕಾರಣಕ್ಕೆ ಅವರಿಗೆ 1.5 ಕೋಟಿ ರೂ. ದಂಡ ವಿಧಿಸಿತ್ತು.
ಸೆಪ್ಟೆಂಬರ್ 2015ರಲ್ಲಿ ಆದಾಯ ತೆರಿಗೆ ಇಲಾಖೆಯು ಅವರ ನಿವಾಸದ ಮೇಲೆ ದಾಳಿ ನಡೆಸಿದ ಬಳಿಕ ಈ ದಂಡ ವಿಧಿಸಲಾಗಿತ್ತು.

ನಟ ವಿಜಯ್ ಈ ದಂಡದ ಆದೇಶದ ವಿರುದ್ಧ 2022ರಲ್ಲಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾ. ಸೆಂಥಿಲ್ ಕುಮಾರ್ ರಾಮಮೂರ್ತಿ ಕಳೆದ ತಿಂಗಳು ತೀರ್ಪನ್ನು ಕಾಯ್ದಿರಿಸಿದ್ದು, ಇಂದು ಅವರು ತೀರ್ಪು ಪ್ರಕಟಿಸಿದ್ದಾರೆ.

- Advertisement -

Latest News

error: Content is protected !!