- Advertisement -
![]()
- Advertisement -
ಮಂಗಳೂರು ; ಮೆದುಳಿನ ರಕ್ತಸ್ರಾವದಿಂದ ಬಳಲುತ್ತಿದ್ದ ಹೆಡ್ ಕಾನ್ಸ್ ಟೇಬಲ್ ನಿಧನರಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.ಮಂಗಳೂರು ನಗರ ಸಶಸ್ತ್ರ ದಳದಲ್ಲಿ ಹೆಡ್ ಕಾನ್ಸ್ ಟೇಬಲ್ ಆಗಿದ್ದ ಹಾವೇರಿ ಮೂಲದ ಮಾರುತಿ ಲಮಾಣಿ(36) ಮೃತರು.
ಹೈವೇ ಪೆಟ್ರೋಲಿಂಗ್ ಮಾಡುವ ಕಾರಿನಲ್ಲಿ ಡ್ರೈವರ್ ಆಗಿ ಕರ್ತವ್ಯದಲ್ಲಿದ್ದ ಮಾರುತಿ ಲಮಾಣಿ ಭಾನುವಾರ ಬೆಳಗ್ಗೆ ಕರ್ತವ್ಯ ಮುಗಿಸಿ ಮನೆಗೆ ತೆರಳಿದ್ದರು. ಇವರ ಪತ್ನಿ ಕದ್ರಿ ಠಾಣೆಯಲ್ಲಿ ಕಾನ್ಸ್ ಟೇಬಲ್ ಆಗಿದ್ದು ಕರ್ತವ್ಯಕ್ಕೆ ತೆರಳಿದ್ದರು. ಮನೆಗೆ ತೆರಳಿ ಮಲಗಿದ್ದಾಗ ಮಾರುತಿ ಅಸ್ವಸ್ಥರಾಗಿದ್ದು ಬಳಿಕ ಸ್ಥಳೀಯರು ಸೇರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಮಾರುತಿ ಸಿಎಆರ್ ಯುನಿಟ್ ನಲ್ಲಿ 9 ವರ್ಷಗಳಿಂದ ಕೆಲಸ ಮಾಡುತ್ತಿದ್ದು ಹೆಡ್ ಕಾನ್ಸ್ ಟೇಬಲ್ ಆಗಿ ಭಡ್ತಿ ಪಡೆದಿದ್ದರು.
- Advertisement -


