Wednesday, June 24, 2026
Homeಕರಾವಳಿಮಂಗಳೂರುಮಂಗಳೂರು; ವಂಚನೆ ಪ್ರಕರಣದಲ್ಲಿ ಕಳೆದ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

ಮಂಗಳೂರು; ವಂಚನೆ ಪ್ರಕರಣದಲ್ಲಿ ಕಳೆದ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು; ವಂಚನೆ ಪ್ರಕರಣದಲ್ಲಿ ಕಳೆದ 7 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರ  ಬಂಧಿಸಿದ್ದಾರೆ. ಕೇರಳದ ಕೊಲ್ಲಂ ಜಿಲ್ಲೆಯ ಜಯಚಂದ್ರ(66) ಬಂಧಿತ ಆರೋಪಿ.

ಆರೋಪಿಯ ವಿರುದ್ಧ 7 ವರ್ಷಗಳ ಹಿಂದೆ ವಂಚನೆ ಪ್ರಕರಣ ದಾಖಲಾಗಿತ್ತು. ವಂಚನೆ ಪ್ರಕರಣ ದಾಖಲಾದಾಗಿನಿಂದಲೂ ಆರೋಪಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ಹೀಗಾಗಿ ಆರೋಪಿಯ ದಸ್ತಗಿರಿಗೆ ಕೋರ್ಟ್  ವಾರೆಂಟ್ ಹೊರಡಿಸಿತ್ತು. ಆದರೆ ಆರೋಪಿ ದಸ್ತಗಿರಿಗೆ ಸಿಗದೇ ತಲೆಮಾರೆಸಿಕೊಂಡಿದ್ದ. ಇಂದು ಸಹಾಯಕ ಪೊಲೀಸ್ ಆಯುಕ್ತರು ದಕ್ಷಿಣ ಉಪವಿಭಾಗ ಹಾಗೂ ಪೊಲೀಸ್ ನಿರೀಕ್ಷಕರು  ಕಂಕನಾಡಿ ನಗರ ಠಾಣೆ ರವರ ಮಾರ್ಗದರ್ಶನ ದಲ್ಲಿ ಮತ್ತು  ಪೊಲೀಸ್ ಉಪ ನಿರೀಕ್ಷಕರು ಕಂಕನಾಡಿ ನಗರ ಠಾಣೆ ರವರ ನೇತೃತ್ವದಲ್ಲಿ ಠಾಣಾ ಸಿಬ್ಬಂದಿಯಾದ HC 944  ಬಾಲರಾಜ್ & PC 3046 ರವಿಕುಮಾರ್ ರವರು  ಕೇರಳ ರಾಜ್ಯದ ಕೊಲ್ಲಮ್ ನಗರದ ವಟ್ಟಕುಟ್ಟು ಲಲಿತ ಮಂದಿರಮ್  ಆರೋಪಿತನ ಮನೆಯಲ್ಲಿ  ಬಂಧಿಸಿದ್ದು, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.

- Advertisement -

Latest News

error: Content is protected !!