Sunday, June 7, 2026
Homeತಾಜಾ ಸುದ್ದಿಮಂಜೇಶ್ವರ: ಹೆತ್ತ ಮಗಳನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಅಪ್ಪ

ಮಂಜೇಶ್ವರ: ಹೆತ್ತ ಮಗಳನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಅಪ್ಪ

- Advertisement -
- Advertisement -

ಮಂಜೇಶ್ವರ: ಪಾಪಿ ಅಪ್ಪನೊಬ್ಬ ಹೆತ್ತ ಮಗಳನ್ನೇ ಕತ್ತಿಯಿಂದ ಕಡಿದು ಕೊಲೆ ಮಾಡಿದ ಘಟನೆ ಮಂಜೇಶ್ವರ ಸಮೀಪದ ಕುಂಜತ್ತೂರು ತೂಮಿನಾಡು ಎಂಬಲ್ಲಿ ಫೆಬ್ರವರಿ 2 ರಂದು ಸಂಜೆ ನಡೆದಿದೆ. ತೂಮಿನಾಡಿನ ಜುಮೈಲಾ(18) ಕೊಲೆಯಾದ ಯುವತಿ. ಆರೋಪದಲ್ಲಿ ತಂದೆ ಉಮ್ಮರ್ ಫಾರೂಕ್ ಕೊಲೆ ಮಾಡಿದಾತ.

ಉಮರ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಪತ್ನಿಯ ಸೋದರಿಯ ಮನೆಯಲ್ಲಿ ವಾಸವಿದ್ದ. ​ಸೋಮವಾರ ಸಂಜೆ 5:30ರ ಹೊತ್ತಿಗೆ, ಉಮರ್ ಮತ್ತು ಆತನ ಬಾವ (ಪತ್ನಿಯ ಸೋದರಿಯ ಪತಿ) ಶೇಕುಂಞ ಎಂಬವರ ನಡುವೆ ಆಸ್ತಿ ವಿಚಾರದಲ್ಲಿ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ಹೋದಾಗ ಉಮರ್ ಹರಿತ ಆಯುಧದಿಂದ ಶೇಖುಞ್ಞ ಮೇಲೆ ದಾಳಿ ಮಾಡಲು ಯತ್ನಿಸಿದ್ದಾನೆ.

ಕಿರುಚಾಟದ ಶಬ್ದ ಕೇಳಿ ಪರಿಸರ ವಾಸಿಗಳು ಸ್ಥಳಕ್ಕೆ ಬಂದಾಗ ಜುಮೈಲಾ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಜೀವ ಉಳಿಸಲಾಗಲಿಲ್ಲ, ಕೃತ್ಯ ನಡೆಯುವ ಸಮಯದಲ್ಲಿ ತಾಯಿ ಕೂಡಾ ಮನೆಯಲ್ಲಿದ್ದರು ಎಂದು ತಿಳಿದುಬಂದಿದೆ.

ವಿದೇಶದಲ್ಲಿದ್ದ ಉಮ್ಮರ್ ಫಾರೂಕ್ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದು, ಆಸ್ತಿಗಾಗಿ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!