Friday, August 28, 2026
Homeಕರಾವಳಿಉಡುಪಿಉಡುಪಿ: ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮನೆಗೆ ಕನ್ನ ಹಾಕಿದ...

ಉಡುಪಿ: ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮನೆಗೆ ಕನ್ನ ಹಾಕಿದ ಕಳ್ಳರು

- Advertisement -
- Advertisement -

 ಉಡುಪಿ: ಉಡುಪಿ: ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮನೆಗೆ ಕನ್ನ ಹಾಕಿದ ಕಳ್ಳರು



ಉಡುಪಿ;ದ.ಕ. ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ಕಾಪು ದಿವಾಕರ ಶೆಟ್ಟಿ ಮನೆಗೆ ಕಳ್ಳರು ಕನ್ನ ಹಾಕಿದ ಘಟನೆ ಗುರುವಾರ ರಾತ್ರಿ ನಡೆದಿದೆ.


ದಿವಾಕರ ಶೆಟ್ಟಿ ಕುಟುಂಬ ಸಮೇತರಾಗಿ ಶುಭ ಕಾರ್ಯಕ್ಕೆಂದು ಮುಂಬಯಿಗೆ ಹೋಗಿದೆ. ಇದನ್ನು ಗಮನಿಸಿದ ಕಳ್ಳರು ಮಧ್ಯರಾತ್ರಿ ಮನೆಗೆ ನುಗ್ಗಿ ಮನೆಯನ್ನು ಜಾಲಾಡಿದ್ದಾರೆ.ಮುಖ್ಯ ದ್ವಾರದ ದಾರಂದ ಮುರಿದು ಒಳ ನುಗ್ಗಿದ ಕಳ್ಳರು ಮನೆಯಲ್ಲಿ ಜಾಲಾಡಿದ್ದು, ಸಿಸಿ ಕ್ಯಾಮರಾದ ದಿಕ್ಕನ್ನು ಬದಲಿಸಿ ಡಿವಿಆರ್‌ ಕೊಂಡೊಯ್ದಿದ್ದಾರೆ. ಮೇಲಿನ ಮಹಡಿಯಲ್ಲಿ ಓರ್ವ ಮಲಗಿದ್ದು, ಕಳ್ಳತನ ನಡೆದ ಕುರಿತು ಅವರ ಗಮನಕ್ಕೆ ಬಂದಿಲ್ಲ ಎನ್ನಲಾದಗಿದೆ.

ಕಳವಾದ ಸೊತ್ತುಗಳ ಕುರಿತು ಇನ್ನಷ್ಟೇ ವಿವರ ತಿಳಿಯಬೇಕಿದೆ. ಡಿವೈಎಸ್ಪಿ ಡಿ.ಟಿ.ಪ್ರಭು, ವೃತ್ತ ನಿರೀಕ್ಷಕ ಅಜ್ಮತ್‌ ಅಲಿ, ಎಸ್ಸೈ ತೇಜಸ್ವಿ, ಬೆರಳಚ್ಚು ವಿಭಾಗದ ಇನ್ಸ್‌ಪೆಕ್ಟರ್‌ ಮೋಹಿನಿ ಕುಮಾರ್‌ ಸೇರಿ ಕಾಪು ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ.



- Advertisement -

Latest News

error: Content is protected !!