ಸುಳ್ಯ; ಹಿಂಬದಿಯಿಂದ ಬಂದ ಕಾರೊಂದು ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ರಿಕ್ಷಾ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು ರಿಕ್ಷಾದಲ್ಲಿದ್ದ ಮಹಿಳಾ ಪ್ರಯಾಣಿಕರೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕೊಡಗು ಜಿಲ್ಲೆಯ ಸಂಪಾಜೆ ಗೇಟ್ ಬಳಿ ನಡೆದಿದೆ. ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ, ಸುಂದರ ಚಿಟ್ಟಿಕ್ಕಾನ(62) ಮೃತ ದುರ್ದೈವಿ.
ನಿನ್ನೆ ಮಧ್ಯಾಹ್ನ ಗ್ರಾ.ಪಂ. ಸದಸ್ಯೆ ಅನಿತಾ ಅರ ತಾಯಿ ಪದ್ಮಾವತಿ ಅವರನ್ನು ಚಡವು ಎಂಬಲ್ಲಿರುವ ಅವರ ಮನೆಗೆ ಬಿಡಲು ಸುಂದರ ಅವರು ರಿಕ್ಷಾದಲ್ಲಿ ಕರೆದುಕೊಂಡು ಹೋಗುತ್ತಿದ್ದಾಗ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ರಾಂಗ್ ಸೈಡ್ ನಲ್ಲಿ ವೇಗವಾಗಿ ಬಂದು ಸುಂದರ ಅವರ ಆಟೋಗೆ ಡಿಕ್ಕಿಯಾಗಿದೆ.ಈ ವೇಳೆ ರಿಕ್ಷಾ ಪಲ್ಟಿಯಾಗಿದ್ದು ಸುಂದರ ಅವರು ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತವಾದ ಬಳಿಕ ಕಾರು ಚಾಲಕ ಕಾರು ನಿಲ್ಲಿಸಿದೇ ಪರಾರಿಯಾಗಿದ್ದಾನೆ. ಈ ಬಗ್ಗೆ ಮಡಿಕೇರಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಕಾರು ಚಾಲಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.


